ಜಿಲ್ಲೆ

ಮಕ್ಕಳ ಮನಸ್ಸಿನಲ್ಲಿ ಅಶುದ್ಧ ಬೀಜ ಬಿತ್ತಬೇಡಿ

ಕುಣಿಗಲ್​ನಲ್ಲಿ ಜ್ಞಾನ ಪೀಠ ಪ್ರಶಸ್ತಿ ಪುರಸತ ಡಾ.ಚಂದ್ರಶೇಖರ ಕಂಬಾರ ಹೇಳಿಕೆ

ಕುಣಿಗಲ್​: ಮಕ್ಕಳ ಮನಸ್ಸು ಪರಿಶುದ್ಧವಾದದ್ದು. ಧರ್ಮ, ಜಾತಿ, ಭಾಷೆ, ಭೇದಭಾವ, ಕೀಳಿರಿಮೆ ಎಂಬುದು ಗೊತ್ತಿರುವುದಿಲ್ಲ. ದೊಡ್ಡವರು ಎನಿಸಿಕೊಂಡವರು ಜಾತಿ ಮತ, ಧರ್ಮ ಭಾಷೆ ಎಂಬ ಬೀಜವನ್ನು ಬಿತ್ತಿ ಮನಸ್ಸನ್ನು ಅಶುದ್ಧಗೊಳಿಸುತ್ತಿದ್ದಾರೆ ಎಂದು ಜ್ಞಾನ ಪೀಠ ಪ್ರಶಸ್ತಿ ಪುರಸತ ಡಾ.ಚಂದ್ರಶೇಖರ ಕಂಬಾರ ಹೇಳಿದರು.

ಪಟ್ಟಣದ ಕನ್ನಡ ಭವನದ ಮಲ್ಲಮ್ಮ ಪಟೇಲ್​ ನಾರಸೀಗೌಡ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಕಸಾಪ ತಾಲೂಕು ಘಟಕ, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್​ ನಡೆ, ಯುವಜನತೆಯ ಕಡೆ ಕಾಲೇಜು ಕಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಂಡು ಮಕ್ಕಳ ಮನಸ್ಸಿನಲ್ಲಿ ಸಾಮಾಜಿಕ ಪರಿವರ್ತನೆಯ ಹಾಗೂ ಪರಿಶುದ್ಧ ಸಮಾಜ ನಿಮಾರ್ಣದ ಬೀಜ ಬಿತ್ತಿ ಅವರನ್ನು ದೇಶದ ಸತ್ಪ್ರಜೆಯನ್ನಾಗಿ ಮಾಡುವ ಮೂಲಕ ಸರ್ವ ಜನರೊಂದಿಗೆ ಸ್ನೇಹ ಬಾಂಧವ್ಯ, ಭಾವೈಕ್ಯತೆಯಿಂದ ಬದುಕಲು ದೊಡ್ಡವರು ಅವಕಾಶ ಮಾಡಿಕೊಡಬೇಕೆಂದು ಹಿರಿಯರಿಗೆ ಸಲಹೆ ನೀಡಿದರು.

ಮಕ್ಕಳೆಂದರೇ ನನ್ನಗೆ ಅತೀವ ಆನಂದ ದೇಶ, ವಿದೇಶದ, ಹಲವು ವಿಶ್ವ ವಿದ್ಯಾಲಯಗಳಲ್ಲಿ ಉಪನ್ಯಾಸ ಮಾಡುತ್ತಿರುವ ಅತಿ ಹೆಚ್ಚಾಗಿ ಮಕ್ಕಳಿಗೆ ಬೋಧನೆ ಮಾಡುತ್ತಿದೆ ಎಂದು ಹೇಳಿದರು.

ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್​.ಸಿದ್ದಲಿಂಗಪ್ಪ ಮಾತನಾಡಿ, ಇಂದಿನಿಂದ 50 ದಿನಗಳ ಕಾಲ ಜಿಲ್ಲೆಯ ಹತ್ತು ತಾಲೂಕುಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್​ನ ನಡೆ ಯುವಜನತೆ ಕಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರ ಯಶಸ್ವಿಗೆ ಎಲ್ಲರೂ ಸಹಕಾರಿಸಬೇಕೆಂದು ಮನವಿ ಮಾಡಿದರು.

ಕಸಾಪ ತಾಲೂಕು ಅಧ್ಯಕ್ಷ ಡಾ.ಕಪನಿಪಾಳ್ಯ ರಮೇಶ್​ ಮಾತನಾಡಿ, ನಮ್ಮ ನಾಡಿನ ಸಾಹಿತ್ಯ, ಸಂಸತಿ ದೇಶದಲ್ಲಿಯೇ ಮೇಲ್ಪತ್ತಿಯಲ್ಲಿ ಇದೆ. ನಾಡಿನ ಸಾಹಿತಿಗಳು, ಜ್ಞಾನ ಪೀಠ ಪುರಸತರು, ಕನ್ನಡ ಪರ ಹೋರಾಟಗಾರರು ಸೇರಿ ಅನೇಕ ಮಹನೀಯರು, ಕನ್ನಡ ನಾಡು, ನುಡಿ, ನೆಲ, ಜಲಕ್ಕಾಗಿ ಶ್ರಮಿಸಿದ್ದಾರೆ. ಅದರ ಫಲವಾಗಿ ಇಂದು ನಮ್ಮ ನಾಡು ವಿಶ್ವದಲ್ಲಿಯೇ ಹೆಸರಾಗಿದೆ ಎಂದು ಹೇಳಿದರು.ಡಾ.ಬಾಲಗುರುಮೂರ್ತಿ, ಸಹಾಯಕ ನಿರ್ದೇಶಕ ಹೊ.ನ.ನೀಲಕಂಠೇಗೌಡ, ಕಸಾಪ ಕಾರ್ಯದರ್ಶಿ ಸಿದ್ದಲಿಂಗಸ್ವಾಮಿ, ಜಯರಾಮಯ್ಯ, ಕೋಶಾಧ್ಯಕ್ಷ ರಾಮಣ್ಣ, ನಿರ್ದೇಶಕರಾದ ಕೆ.ಆರ್​.ರಂಗನಾಥ್​, ಸಿ.ಸಿ.ಶಿವಣ್ಣ, ದಲಿತ್​ನಾರಾಯಣ್​, ಕೆ.ಎನ್​.ಲೋಕೇಶ್​, ಉಮೇಶ್​, ನಿಡಸಾಲೆ ಪ್ರಸಾದ್​, ಎಂ.ಡಿ.ಮೋಹನ್​, ಲೀಲಾವತಿ, ಮಾಜಿ ಅಧ್ಯಕ್ಷ ದಿನೇಶ್​ಕುಮಾರ್​, ಕ.ಚ.ಕೃಷ್ಣಪ್ಪ, ಶಿಕ್ಷಕಿ ಡಾ.ಸಿ.ಡಿ.ಸೌಮ್ಯ ಇದ್ದರು.

ಮೊಬೈಲ್​ ಗೀಳು ಎಚ್ಚರ

ಅನೇಕ ಮಂದಿ ಸಾಹಿತ್ಯ, ವಚನಗಳ ಮೂಲಕ ಸಮಾಜದ ಪರಿವರ್ತನೆಗಾಗಿ ಕೊಡುಗೆ ನೀಡಿದ್ದಾರೆ. ಆದರೆ ಇತ್ತೀಚಿಗೆ ಸಾಹಿತ್ಯವನ್ನು ಓದುವವರ ಸಂಖ್ಯೆ ಕಡಿಮೆಯಾಗಿದೆ. ಜನರಿಗೆ ಮೊಬೈಲ್​ನ ಗೀಳು ಹೆಚ್ಚಾಗಿದೆ. ಇದು ಯುವ ಜನಾಂಗದ ಬುದ್ಧಿಶಕ್ತಿ ಮೇಲೆ ದುಷ್ಟಪರಿಣಾಮ ಬೀರಿದೆ ಎಂದು ಡಾ.ಚಂದ್ರಶೇಖರ ಕಂಬಾರ ಎಚ್ಚರಿಸಿದರು.