ಮಬನೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮ ಜರುಗಿತು. ಶಾಸಕ ವಿಶ್ವಾಸ ವೈದ್ಯ, ಫಕೀರಪ್ಪ ಹದ್ದನ್ನವರ, ಪುಂಡಲೀಕ ಮೇಟಿ, ನಿಂಗವ್ವ ಮೇಟಿ ಇತರರು ಇದ್ದರು. 
ಜಿಲ್ಲೆ

ಮಕ್ಕಳ ಪ್ರತಿಭೆ ಗುರುತಿಸಬೇಕು

ಬೆನಕಟ್ಟಿ: ಮಕ್ಕಳ ಪ್ರತಿಭೆ ಅನಾವರಣಗೊಳಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

ಸಮೀಪದ ಮಬನೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಸಕ್ತ ಸಾಲಿನ ಪ್ರತಿಭಾ ಕಾರಂಜಿ ಹಾಗೂ ನೂತನ ಅಡುಗೆ ಕೋಣೆಯನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.

ಜಿಪಂ ಮಾಜಿ ಸದಸ್ಯ ಫಕೀರಪ್ಪ ಹದ್ದನ್ನವರ ಮಾತನಾಡಿ, ನಿರ್ಣಾಯಕರು ಮಕ್ಕಳ ಪ್ರತಿಭೆ ಕಂಡುಹಿಡಿದು ಭವಿಷ್ಯ ರೂಪಿಸಿ ಎಂದರು. ಗ್ರಾಪಂ ಅಧ್ಯಕ್ಷೆ ನಿಂಗವ್ವ ಮೇಟಿ ಅಧ್ಯಕ್ಷತೆ ವಹಿಸಿದ್ದರು.

ಬಿಇಒ ಮೋಹನ ದಂಡಿನ, ಅಕ್ಷರ ದಾಸೋಹ ನಿರ್ದೇಶಕಿ ಮೈತ್ರಾದೇವಿ ವಸ್ತ್ರದ, ಸಮನ್ವಯಾಧಿಕಾರಿ ಬಿ.ಎನ್. ಬ್ಯಾಳಿ, ಬಿ.ಎನ್. ಮಲಕಣ್ಣವರ, ಮುಖಂಡರಾದ ಪುಂಡಲೀಕ ಮೇಟಿ, ರಾಮಚಂದ್ರ ಪಟಾತ, ಐ.ಬಿ.ನರಿ, ಯಲ್ಲಪ್ಪ ನರಿ, ಮಹಾದೇವ ಪಟಾತ, ಪಡೆಪ್ಪ ನರಿ, ಉಮೇಶ ದಂಡಿನ, ಉದಯ ನರಿ, ಗ್ರಾಪಂ ಮಾಜಿ ಅಧ್ಯಕ್ಷೆ ಮಂಜುಳಾ ಮಾದರ, ಬಸವ್ವ ಹಡಪದ, ವಿಠ್ಠಲ ಚುಂಚನೂರ, ಪಿಡಿಒ ಚಿಪ್ಪಲಕಟ್ಟಿ, ಶಿಕ್ಷಕ ಎಚ್.ವೈ.ಗೌಡರ, ಮುಖ್ಯಶಿಕ್ಷಕ ಜಿ.ಎ.ಸುಣಗಾರ ಇತರರು ಇದ್ದರು.