ಗುಂಡ್ಲುಪೇಟೆ: ಪಟ್ಟಣದ ವಿನಾಯಕ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಪ್ರತಿಭೆ ದಿನ (ಪೋಫಿಕರ್ ಟ್ಯಾಲೆಂಟ್ ಡೇ)ವನ್ನು ಪರಿಸರ ಸಂರಕ್ಷಕ ಸಿ.ಎಂ.ವೆಂಕಟೇಶ್ ಉದ್ಘಾಟಿಸಿದರು.
ಶ್ರೀ ವಿನಾಯಕ ಶಾಲೆಯ ಆಡಳಿತ ಮಂಡಳಿಯ ಚಂದ್ರಶೇಖರ್ ಹಾಗೂ ಶ್ರೀಮತಿ ಲಕ್ಷ್ಮೀ ಚಂದ್ರಶೇಖರ್ ಕಾರ್ಯಕ್ರಮಕ್ಕೆ ವೇದಿಕೆ ಕಲ್ಪಿಸಿದರು. ಪ್ರತಿಭೆ ದಿನ ಕಾರ್ಯಕ್ರಮದಲ್ಲಿ ಮಕ್ಕಳು ತಮ್ಮಲ್ಲಿರುವ ವಿವಿಧ ಪ್ರತಿಭೆಗಳನ್ನು ಅನಾವರಣಗೊಳಿಸಿದರು. ಎತ್ತ ನೋಡಿದರು ಮಕ್ಕಳು ತಯಾರಿಸಿದ್ದ ವಿವಿಧ ಖಾದ್ಯಗಳು ಬಾಯಿನೀರು ಸುರಿಸುತ್ತಿದ್ದವು. ಹಲವಾರು ಜನರು ಮಕ್ಕಳು ತಯಾರಿಸಿದ ಖಾದ್ಯ ಸವಿದು ಬಾಯಿ ಚಪ್ಪರಿಸಿದರು. ವ್ಯಾಪಾರ ಜೋರಾಗಿದ್ದ ಮಕ್ಕಳ ಜೇಬು ಕಾಂಚನದಿಂದ ತುಂಬಿತ್ತು. ಇದರಿಂದ ಮಕ್ಕಳಿಗೆ ವ್ಯವಹಾರಿಕ ಜ್ಞಾನ ಹಾಗೂ ಮನೆಯಲ್ಲಿ ಪಾಲಕರು ಅಡುಗೆ ಮಾಡಲು ಎಷ್ಟೊಂದು ಶ್ರಮವಹಿಸಬೇಕು ಎಂಬುದು ತಿಳಿದುಕೊಂಡರು.
ಇದೇ ವೇಳೆ ಕರೋಕೆ, ಭರತನಾಟ್ಯ, ಕ್ಲಾಸಿಕಲ್ ಡಾನ್ಸ್, ಏಕಪಾತ್ರ ಅಭಿನಯ, ನೃತ್ಯ, ಕವಿತೆ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರತಿಭೆ ಅನಾವರಣಗೊಳಿಸಿದರು. ಶ್ರೀಮತಿ ಸರೋಜಮ್ಮ, ಶ್ರೀಮತಿ ಲಕ್ಷ್ಮೀಚಂದ್ರಶೇಖರಪ್ಪ, ಶ್ರುತಿ, ಚಿಟ್ಟಿಬಾಬು ಹಾಗೂ ಶಿಕ್ಷಕರು ಮತ್ತು ಸಿಬ್ಬಂದಿ ಇದ್ದರು.