ಯಾದಗಿರಿ: ಬೆಳೆಯುವ ಹಂತದಲ್ಲಿನ ಮಕ್ಕಳು ಸದಾ ಸೃಜನಾತ್ಮಕ ಚಟುವಟಿಕೆಯಲ್ಲಿ ತೊಡಗಿರುತ್ತವೆ. ಅವುಗಳ ಲಾಲನೆ, ಪಾಲನೆಯ ವಿಷಯದಲ್ಲಿ ಆರೈಕೆದಾರರಲ್ಲಿ ಸಹನೆ ಇರಬೇಕು ಎಂದು ತಾಪಂ ಇಒ ಬಸವರಾಜ ಶರಬೈ ಸಲಹೆ ನೀಡಿದರು.
ನಗರದ ತಾಪಂ ಕಚೇರಿಯ ಸಾಮಥ್ರ್ಯ ಸೌಧದಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿಯ ಸಹಯೋಗದಲ್ಲಿ ಆಯೋಜಿಸಿದ್ದ ಶಿಶುಪಾಲನಾ ಕೇಂದ್ರಗಳ ಕೇರ್ಟೇಕರ್ಗಳ ತರಬೇತಿ ಕಾಯರ್ಾಗಾರಕ್ಕೆ ಚಾಲನೆ ನೀಡಿ ಮಾತನಾಡಿ, ಸಕರ್ಾರ ಗ್ರಾಮೀಣ ಭಾಗದಲ್ಲಿನ ಮಹಿಳಾ ಕೂಲಿ ಕಾಮರ್ಿಕರ ಮಕ್ಕಳ ಆರೋಗ್ಯ ಮತ್ತು ಆರೈಕೆ ದೃಷ್ಠಿಯಿಂದ ಕೂಸಿನ ಮನೆ ಯೋಜನೆ ಜಾರಿಗೆ ತಂದಿದೆ. 6 ವರ್ಷದೊಳಗಿನ ಮಕ್ಕಳನ್ನು ಅಲ್ಲಿ ದಾಖಲಿಸಲಾಗುತ್ತದೆ ಎಂದರು.
ಕೂಲಿ ಕೆಲಸಕ್ಕೆ ಹೋಗುವ ತಾಯಂದಿರು ತಮ್ಮ ಮಕ್ಕಳನ್ನು ಈ ಕೇಂದ್ರದಲ್ಲಿ ಬಿಟ್ಟು ಹೋದರೆ, ತಾಯಂದಿರು ಕೆಲಸ ಮಾಡಿ ಬರುವವರೆಗೆ ಕೂಸಿನ ಮನೆಯಲ್ಲಿ ಮಗುವನ್ನು ಆರೈಕೆ ಮಾಡಲಾಗುತ್ತದೆ. ಆರೈಕೆದಾರರು ತಮ್ಮ ಸ್ವಂತ ಮಕ್ಕಳಂತೆ ಕಾಣಬೇಕು. ಮನೆಯಲ್ಲಿ ಮೂಲಸೌಲಭ್ಯ, ಪ್ರಥಮ ಚಿಕಿತ್ಸೆ, ಆಟಿಕೆ ಸಾಮಾನು, ಕಲಿಕಾ ಸಾಮಗ್ರಿ, ಶುದ್ಧ ಕುಡಿಯುವ ನೀರು, ಪೌಷ್ಟಿಕ ಆಹಾರ ಕ್ರಮ ಸೇರಿದಂತೆ ಮಕ್ಕಳಿಗೆ ಅಕ್ಷರ ಅಭ್ಯಾಸ ಮಾಡಿಸಲಾಗುತ್ತದೆ ಎಂದು ತಿಳಿಸಿದರು.
ಯೋಜನಾಕಾರಿ ಶಶಿಧರ ಹೀರೆಮಠ, ಸಹಾಯಕ ಲೆಕ್ಕಾಕಾರಿ ಕಾಶಿನಾಥ, ವ್ಯವಸ್ಥಾಪಕ ಶಿವರಾಯ, ಅನಸರ್ ಪಟೇಲ್, ಭೀಮರಡ್ಡಿ ಪಾಟೀಲ್, ಉಷಾ, ಶರಣಮ್ಮ ಇದ್ದರು.