filter: 0; jpegRotation: 0; fileterIntensity: 0.000000; filterMask: 0; module:1facing:0; hw-remosaic: 0; touch: (-1.0, -1.0); modeInfo: ; sceneMode: Auto; cct_value: 0; AI_Scene: (-1, -1); aec_lux: 0.0; hist255: 0.0; hist252~255: 0.0; hist0~15: 0.0; 
ಜಿಲ್ಲೆ

ಮಕ್ಕಳ ನೆಚ್ಚಿನ ಡಿಎಂ ಸರ್ ಸೇವೆ ಅನನ್ಯ

ಕಕ್ಕೇರಾ: ನಮ್ಮೂರಿನ ಶಾಲೆಯಲ್ಲಿ ಸುದೀರ್ಘ ೩೨ ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಡಿಎಂ ಸರ್ ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿಸಲು ನೀಡಿದ ಕೊಡುಗೆ ಅನನ್ಯವಾಗಿದೆ ಎಂದು ಕೆಎಂಎಫ್ ನಿರ್ದೇಶಕ ಹನುಮಂತರಾಯ ಜಹಾಗೀರದಾರ ಹೇಳಿದರು.

ಮೇ ೩೧ರಂದು ವಯೋನಿವೃತ್ತಿ ಹೊಂದಿದ ಪಟ್ಟಣದ ಸರ್ಕಾರಿ ಪ್ರೌಢಶಾಲಾ ವೃತ್ತಿಶಿಕ್ಷಣ ಶಿಕ್ಷಕ ದೇವಿಂದ್ರಪ್ಪ ಆಲದಾರ್ತಿ(ಡಿಎಂ) ದಂಪತಿಯನ್ನು ಶಾಲಾ ಆಡಳಿತ ಮಂಡಳಿ ಶನಿವಾರ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಕ್ಷಕರೊಬ್ಬರು ೩೪ ವರ್ಷದ ಸೇವಾವಧಿಯಲ್ಲಿ ೩೨ ವರ್ಷ ನಮ್ಮ ಶಾಲೆಗೆ ಆಗಮಿಸಿದ ಆಲದಾರ್ತಿ ಇಲ್ಲೇ ನಿವೃತ್ತಿ ಹೊಂದಿದ್ದು ಸಂತಸದ ವಿಷಯ. ಅವರ ಮುಂದಿನ ಜೀವನ ಉಲ್ಲಾಸದಿಂದ ಕೂಡಿರಲಿ ಎಂದು ಹಾರೈಸಿದರು.

ಸನ್ಮಾನ ಸ್ವೀಕರಿಸಿದ ದೇವಿಂದ್ರಪ್ಪ ಆಲದಾರ್ತಿ ಮಾತನಾಡಿ, ಮೇಲಧಿಕಾರಿಗಳು, ಸ್ಥಳೀಯ ಜನ ಮತ್ತು ಆಡಳಿತ ಮಂಡಳಿ ಸಹಕಾರದಿಂದ ಸುದೀರ್ಘ ೩೨ ವರ್ಷ ಈ ಶಾಲೆಯಲ್ಲಿ ಒಂದೂ ಕಪ್ಪುಚುಕ್ಕೆ ಇಲ್ಲದೆ ಸೇವೆ ಸಲ್ಲಿಸಿದ ತೃಪ್ತಿ ನನಗಿದೆ. ಈ ಶಾಲೆ ಮತ್ತು ಊರಿನ ಋಣ ಯಾವತ್ತೂ ತೀರಿಸಲು ಸಾಧ್ಯವಿಲ್ಲ ಎಂದು ಭಾವುಕರಾಗಿ ಹೇಳಿದರು.

ಶ್ರೀ ನಂದಣ್ಣಪ್ಪ ಪೂಜಾರಿ ಕರ‍್ಯಕ್ರಮ ಉದ್ಘಾಟಿಸಿದರು. ಮುಖ್ಯ ಶಿಕ್ಷಕ ಬಸಯ್ಯ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಡಯಟ್ ಹಿರಿಯ ಉಪನ್ಯಾಸಕ ಎಂ.ಎA. ತಳವಾರ, ಡಯಟ್ ವಿಷಯ ಪರಿವೀಕ್ಷಕ ವೆಂಕೋಬ ಬಿ., ಉಪನ್ಯಾಸಕ ಅಶೋಕ ಕೋಳೂರ, ನಿವೃತ್ತ ಶಿಕ್ಷಕರಾದ ಬಿ.ಡಿ. ತಳವಾರ, ನಿಂಗಪ್ಪ, ರಾಮಲಿಂಗಪ್ಪ, ದೇವಿಂದ್ರಪ್ಪ ಬಳಿಚಕ್ರ, ವಾಸುದೇವ ಗಂಗೆ ಇತರರು ಡಿಎಂ ಸರ್ ಸೇವೆಯನ್ನು ಕೊಂಡಾಡಿದರು.

ಎಸ್‌ಡಿಎAಸಿ ಅಧ್ಯಕ್ಷ ದೇವಿಂದ್ರಪ್ಪ ದೇಸಾಯಿ, ಪದವಿಪೂರ್ವ ಕಾಲೇಜು ಪ್ರಾಂಶುಪಾಲೆ ಅನುರಾಧಾ ಗೌಡಗೇರಾ, ನಿಂಗಯ್ಯ ಬೂದಗುಂಪಿ, ರಮೇಶಶೆಟ್ಟಿ, ಬಸವರಾಜ ಆರ್ಯಶಂಕರ, ಲಕ್ಷö್ಮಣ ಲಿಂಗದಳ್ಳಿ, ಸೋಮಶೇಖರ ದೊರೆ, ಚಂದ್ರು ವಜ್ಜಲ್, ಬಸವರಾಜ ತಳ್ಳಳ್ಳಿ ಇತರರಿದ್ದರು.

ಮೋನಿಕಾ ಸಂಗಡಿಗರು ಪ್ರಾರ್ಥಿಸಿದರು. ಶೋಭಾ ಬಡಿಗೇರ ಸ್ವಾಗತಿಸಿದರು. ಶಿವು ಲಿಂಗದಳ್ಳಿ ಪರಿಚಯಿಸಿದರು. ದೇವಿಂದ್ರಪ್ಪ ಸಜ್ಜನ್ ಪ್ರಾಸ್ತಾವಿಕ ಮಾಡಿದರು. ಮಹಾಂತಯ್ಯ ಸ್ವಾಮಿ, ಅಶ್ವಿನಿ ನಿರೂಪಣೆ ಮಾಡಿದರು. ರಾಜು ಬೊಮ್ಮನಳ್ಳಿ ವಂದಿಸಿದರು. ಶಿಕ್ಷಕರು, ವಿದ್ಯಾರ್ಥಿಗಳು, ಸಾರ್ವಜನಿಕರು ತೆರೆದ ಕಾರಿನಲ್ಲಿ ಅದ್ದೂರಿ ಮೆರವಣಿಗೆ ಮೂಲಕ ನೆಚ್ಚಿನ ಶಿಕ್ಷಕ ಆಲದಾರ್ತಿ ಅವರನ್ನು ಹೃದಯಸ್ಪರ್ಶಿಯಾಗಿ ಬೀಳ್ಕೊಟ್ಟರು.