ಜಿಲ್ಲೆ

ಮಕ್ಕಳ ಕಲಿಕಾ ಸಮಸ್ಯೆ ಗುರುತಿಸಿ

ಚಿತ್ರದುರ್ಗ:ಗುಣಮಟ್ಟದ ಬೋಧನೆಗೆ ನಿರಂತರ ಅಧ್ಯಯನದ ಅಗತ್ಯವಿದೆ ಎಂದು ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಹೇಳಿದರು. ನಗರದ ಡಯಟ್‌ನಲ್ಲಿ ಶಾಲಾ ಶಿಕ್ಷಣ ಇಲಾಖೆ, ಸಮಗ್ರ ಶಿಕ್ಷಣ ಕರ್ನಾಟಕ ಹಾಗೂ ಡಿಎಸ್‌ಇಆರ್‌ಟಿ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ಸರ್ಕಾರಿ ಪ್ರೌಢಶಾಲಾ ಕನ್ನಡ ಮತ್ತು ವಿಜ್ಞಾನ ಶಿಕ್ಷಕರಿಗೆ ಮಂಗಳವಾರ ಆಯೋಜಿಸಿದ್ದ ವಿಷಯಾಧಾರಿತ 5 ಮತ್ತು 8 ನೇ ತರಗತಿ ಮೌಲ್ಯಾಂಕನ ವಿಶ್ಲೇಷಣೆ ಮತ್ತು ಕಲಿಕಾ ಫಲಗಳ ಆಧಾರಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕರು ಮಕ್ಕಳ ಕಲಿಕಾ ಸಮಸ್ಯೆಗಳನ್ನು ಗುರುತಿಸಿ ಸೂಕ್ತ ಮಾರ್ಗದರ್ಶನ ಮಾಡಬೇಕು. 5 ದಿನಗಳ ಕಾಲ ಕಲಿಕಾ ಫಲಗಳ ಆಧಾರದ ಮೇಲೆ ತರಬೇತಿ ನೀಡಲಾಗುತ್ತದೆ ಎಂದರು. ಜಿಲ್ಲಾ ನೋಡಲ್ ಅಧಿಕಾರಿಗಳಾದ ಎಸ್.ಸಿ.ಪ್ರಸಾದ್, ಎಸ್.ಜ್ಞಾನೇಶ್ವರ, ಹಿರಿಯ ಉಪ ನ್ಯಾಸಕಿ ಎಚ್.ಗಿರಿಜಮ್ಮ, ಉಪನ್ಯಾಸಕರಾದ ಯು.ಸಿದ್ದೇಶಿ, ಎಸ್.ಬಸವರಾಜು, ಎನ್.ಮಂಜುನಾಥ್, ಸಂಪನ್ಮೂಲ ವ್ಯಕ್ತಿಗಳಾದ ದಿನೇಶ್, ಸುರೇಂದ್ರ, ತಿಮ್ಮರಾಜು, ಗೀತಾ, ವಿದ್ಯಾ, ವೆಂಕಟೇಶ್, ಕುಮಾರಸ್ವಾಮಿ, ಅನಿಲ್‌ಕುಮಾರ್ ಮತ್ತಿತರರು ಇದ್ದರು.