ಚಿಕ್ಕಮಗಳೂರು: ಮಕ್ಕಳು ಅಂಕ ಗಳಿಸಬೇಕೆನ್ನುವುದನ್ನಷ್ಟೆ ಉz್ದೆÃಶವಾಗಿರಿಸಿಕೊಳ್ಳದೆ ಅವರ ಆಸಕ್ತಿ ಗುರುತಿಸಿ ಉತ್ತೇಜಿಸುವ ಕಾರ್ಯ ಕೈಗೊಳ್ಳಬೇಕು. ಮಕ್ಕಳಿಗೆ ಸಂಸ್ಕಾರ ಕೊಡಿಸುವತ್ತ ಗಮನ ಹರಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಪಿ.ನಾಗರಾಜ್ ಪೋಷಕರಿಗೆ ಕಿವಿಮಾತು ಹೇಳಿದರು.
ನಗರದ ಸಂಜೀವಿನಿ ವಿದ್ಯಾಸಂಸ್ಥೆಯಲ್ಲಿ ಮಂಗಳವಾರ ಸಂಜೆ ನಡೆದ ಪೋಷಕರ ದಿನಾಚರಣೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಅಂಕ ಗಳಿಕೆಯೊಂದೇ ವಿದ್ಯಾರ್ಥಿಗಳ ಭವಿಷ್ಯದ ಮಾನದಂಡವಾಗುವುದಿಲ್ಲ. ಹಿಂದಿನAತೆ ಉತ್ತಮ ಅಂಕ ಪಡೆದು ಉತ್ತೀರ್ಣರಾದ ಮಾತ್ರಕ್ಕೆ ಉದ್ಯೋಗ ದೊರೆಯುವುದಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾದರೆ ಮಾತ್ರ ಉದ್ಯೋಗಾವಕಾಶ ಲಭ್ಯವಾಗುತ್ತದೆ. ಅದಕ್ಕೆ ಪೂರಕವಾದ ಆಲೋಚನಾ ಶಕ್ತಿ, ಮಾನಸಿಕ ಸಾಮರ್ಥ್ಯವನ್ನು ವೃದ್ಧಿಸುವ ಪ್ರಯತ್ನವೂ ನಡೆಯಬೇಕಿದೆ ಎಂದರು.
ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಕೂಡ ಪಾಲ್ಗೊಳ್ಳಲು ಅವಕಾಶ ಕಲ್ಪಿಸಬೇಕು. ಅವರು ಕ್ರೀಡೆಯಲ್ಲಿ ಅಥವಾ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿರಬಹುದು. ಹೀಗಿರುವಲ್ಲಿ ಓದಿನ ಜೊತೆಗೆ ಅವರ ಪ್ರತಿಭೆ ಗುರುತಿಸುವ ಮೂಲಕ ಸೂಕ್ತ ರೀತಿಯಲ್ಲಿ ಪ್ರೋತ್ಸಾಹಿಸಬೇಕು. ಪ್ರತಿಯೊಂದಕ್ಕೂ ಶಿಕ್ಷಕರನ್ನಷ್ಟೆ ಅವಲಂಬಿಸದೆ ವಿದ್ಯಾರ್ಥಿಗಳ ವರ್ತನೆಗಳ ಬಗ್ಗೆ ನಿಗಾ ಇಡಬೇಕು. ಸ್ವತಃ ನಿಭಾಯಿಸುವ ಮೂಲಕ ಅವರ ಆಸಕ್ತಿಗೆ ನೀರೆರೆಯಬೇಕು ಎಂದು ಸಲಹೆ ನೀಡಿದರು.
ಮಕ್ಕಳಿಗೆ ಶಿಕ್ಷಣ ಕೊಡಿಸಲು ಗುಣಮಟ್ಟದ ಶಾಲೆಗಳನ್ನು ಆರಿಸಿಕೊಂಡಾಗ ಮಾತ್ರ ಉತ್ತಮ ಸಂಸ್ಕಾರ ಸಿಗಲು ಸಾಧ್ಯ. ಒಂದು ಶಾಲೆಯ ಶಿಕ್ಷಕರ ಸಾಮರ್ಥ್ಯವನ್ನು ಮೀರಿ ಯಾವುದೇ ಶಿಕ್ಷಣ ಸಂಸ್ಥೆ ಬೆಳೆಯಲು ಸಾಧ್ಯವಿಲ್ಲ. ಒಂದು ಶಿಕ್ಷಣ ಸಂಸ್ಥೆಯಲ್ಲಿ ಉತ್ತಮವಾದ ಶಿಕ್ಷಣ ದೊರೆಯುತ್ತಿದೆ. ಇಲ್ಲಿ ಕಲಿತ ಮಕ್ಕಳು ಉತ್ತಮ ಭವಿಷ್ಯ, ಸಂಸ್ಕಾರ ಪಡೆದುಕೊಂಡಿದ್ದಾರೆAದರೆ ಅದಕ್ಕೆ ಆ ಶಾಲೆಯ ಶಿಕ್ಷಕರು ಕಾರಣವೇ ಹೊರತು ಶಾಲೆಯಲ್ಲಿರುವ ಸೌಲಭ್ಯಗಳು ಕಾರಣವಾಗುವುದಿಲ್ಲ. ಈ ನಿಟ್ಟಿನಲ್ಲಿ ಹಲವಾರು ಕಡೆಗಳಲ್ಲಿ ಉತ್ತಮವಾಗಿ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ಪೇಜಾವರ ಮಠ ಸ್ವಾಮ್ಯದ ಈ ಶಾಲೆ ಮಕ್ಕಳ ಬದುಕಿಗೆ ಆರಂಭಿಕ ಭದ್ರತೆಯನ್ನು ಒದಗಿಸುತ್ತಿದೆ. ಕಳೆದ ಹಲವಾರು ವರ್ಷಗಳಿಂದ ಈ ಸಂಸ್ಥೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.೧೦೦ರಷ್ಟು ಫಲಿತಾಂಶ ಸಾಧಿಸುತ್ತಿದೆ. ಇದಕ್ಕೆ ಪಾಲಕರ ಸಹಕಾರವೂ ಕಾರಣವಾಗಿದೆ ಎಂದರು.
ಇತ್ತೀಚೆಗೆ ಮಕ್ಕಳಲ್ಲಿ ಹೆಚ್ಚಾಗಿರುವ ಮೊಬೈಲ್ ಗೀಳಿನಿಂದಾಗಿ ಅವರ ಸ್ವತಂತ್ರ ಆಲೋಚನಾ ಶಕ್ತಿ ಕಡಿಮೆಯಾಗುತ್ತಿದೆ. ಮನರಂಜನೆಯಿAದ ಹಿಡಿದು ಶಿಕ್ಷಕರು ಹೇಳಿದ ಯೋಜನಾ ವರದಿ ತಯಾರಿಸುವವರೆಗೂ ಮೊಬೈಲ್‌ಅನ್ನು ಅವಲಂಬಿಸುವುದರಿAದ ವಿದ್ಯಾರ್ಥಿಗಳ ಅನುಭವಾತ್ಮಕ ಕಲಿಕೆಗೆ ಹಿನ್ನಡೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಶಾಲಾ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕ ಸತ್ಯನಾರಾಯಣ್ ಮಾತನಾಡಿ, ಮಕ್ಕಳನ್ನು ಬೆಳೆಸುವ ರೀತಿ ಅವುಗಳ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ. ಅಮ್ಮನೇ ಮೊದಲ ಗುರು. ಈ ಹಿನ್ನೆಲೆಗಳನ್ನು ಆಧರಿಸಿ ಯಶಸ್ಸಿನ ಹಾದಿಯಲ್ಲಿ ಮಕ್ಕಳು ಸಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷೆ ಎಸ್.ಶಾಂತಕುಮಾರಿ ಮಾತನಾಡಿ, ಮಕ್ಕಳಿಗೆ ಮನೆಯಿಂದಲೇ ಸಂಸ್ಕಾರದ ಕಲಿಕೆ ದೊರೆಯಬೇಕು. ಅನಂತರದಲ್ಲಿ ಶಾಲೆಯಿಂದ ನಿರೀಕ್ಷಿಸಬೇಕು. ಮಕ್ಕಳು ಪಾಲಕರು ಹಾಗೂ ಅತ್ತೆ, ಮಾವಂದಿರನ್ನು ನೋಡಿಕೊಳ್ಳುವ ಮಾನಸಿಕತೆ ಬೆಳೆಸಿಕೊಳ್ಳಬೇಕು. ಇದು ಸಂಸ್ಕಾರಯುತ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಹೇಳಿದರು.
ಸಂಸ್ಥೆಯ ಕಾರ್ಯಕಾರಿ ಮಂಡಳಿ ಸದಸ್ಯ ಡಾ.ಪಿ.ಮೋಹನ್, ಸಂಸ್ಥೆಯ ಖಜಾಂಚಿ ಎಂ.ಪುAಡರೀಕಾಕ್ಷ ಉಡುಪ, ಪ್ರಾಚಾರ್ಯರಾದ ಎಸ್.ಆರ್.ಹೇಮಾ ಉಪಸ್ಥಿತರಿದ್ದರು.