ಜಿಲ್ಲೆ

ಮಕ್ಕಳ ಆರೋಗ್ಯದ ಬಗ್ಗೆ ತಾತ್ಸಾರ ಬೇಡ

ಚಿತ್ರದುರ್ಗ: ಮಕ್ಕಳು ಬೆಳೆದ ನಂತರವೂ ಹಲ್ಲಿನ ವಸಡು ರೋಗ ತಡೆಗೆ ಪಾಲಕರು ನಿತ್ಯ ಮಕ್ಕಳ ಬಾಯಿ ಆರೈಕೆ ಮಾಡಬೇಕು ಎಂದು ದಂತ ಚಿಕಿತ್ಸಕ ಡಾ.ಸುನೀಲ್ ವಡವಡಗಿ ಹೇಳಿದರು. ನಗರದ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಆಯೋಜಿಸಿರುವ ಬಾಲಗೋಕುಲ ಮಕ್ಕಳ ಬೇಸಿಗೆ ಶಿಬಿರದ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಕ್ಕಳ ಬಾಯಿ ಆರೋಗ್ಯದೆಡೆ ನಿಗಾ ವಹಿಸುವುದರಿಂದಾಗಿ ಅವರ ಹಲ್ಲುಗಳು ಹಾಳಾಗುವುದನ್ನು ನಿಯಂತ್ರಿಸಬಹುದಾಗಿದೆ ಎಂದರು. ಪ್ರಕೃತಿ ಆಯುರ್ವೇದ ಚಿಕಿತ್ಸಾಲಯದ ವೈದ್ಯೆ ಡಾ.ಮಾಧವಿ ವಡವಡಗಿ ಮಾತನಾಡಿದರು. ಶಿಬಿರದ ಆಯೋಜಕ ರವಿ ಕೆ. ಅಂಬೇಕರ್ ಇದ್ದರು.