ಬಸವಕಲ್ಯಾಣ ತಾಲೂಕಿನ ನಾರಾಯಣಪೂರ ಗ್ರಾಮದ ಭವಾನಿ ದೇವಸ್ಥಾನ ಆವರಣದಲ್ಲಿ ಸೋಮವಾರ ನಡೆದ ಬಾಲ ಮೇಳ ಕಾರ್ಯಕ್ರಮವನ್ನು ತಾಪಂ ಇಒ ರಮೇಶ ಸುಲ್ಫಿ ಉದ್ಘಾಟಿಸಿದರು. ಗ್ರಾಪಂ ಅಧ್ಯಕ್ಷೆ ಯಂಕಮ್ಮ ಇಸ್ಲಾಂಪುರೆ, ಸಿಡಿಪಿಒ ಗೌತಮ ಶಿಂಧೆ, ಮಲ್ಲಮ್ಮ ಬಿರಾದಾರ, ಅಶೋಕ ಉಚ್ಚೇಕರ, ಸೀಮಾ ಚಟ್ನಳ್ಳಿ ಇತರರಿದ್ದರು. 
ಜಿಲ್ಲೆ

ಮಕ್ಕಳ ಅಭಿವೃದ್ಧಿಗೆ ಅಂಗನವಾಡಿ ಸಹಕಾರಿ

ಬಸವಕಲ್ಯಾಣ: ಮಕ್ಕಳ ದೈಹಿಕ ಸದೃಢತೆ ಮತ್ತು ಸರ್ವಾಂಗೀಣ ಅಭಿವೃದ್ಧಿಗೆ ಅಂಗನವಾಡಿ ಕೇಂದ್ರಗಳು ಸಹಕಾರಿಯಾಗಿವೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ಸುಲ್ಫಿ ಹೇಳಿದರು.

ನಾರಾಯಣಪೂರ ಗ್ರಾಮದ ಭವಾನಿ ದೇವಸ್ಥಾನ ಆವರಣದಲ್ಲಿ ಕೆಕೆಆರ್‌ಡಿಬಿ, ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಶು ಅಭಿವೃಧ್ಧಿ ಯೋಜನೆ ಹಾಗೂ ಕಲಿಕಾ ಟಾಟಾ ಟ್ರಸ್ಟ್ ಬೆಂಗಳೂರು ಇವರ ಸಹಯೋಗದಲ್ಲಿ ಗ್ರಾಪಂ ಶಾಲಾ ಪೂರ್ವ ಶಿಕ್ಷಣ ಬಲವರ್ದನೆ ಕಾರ್ಯಕ್ರಮದಡಿ ಸೋಮವಾರ ಆಯೋಜಿಸಿದ್ದ ಬಾಲ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಂಗನವಾಡಿ ಕೇಂದ್ರದಲ್ಲಿ ನೀಡುವ ಪೌಷ್ಠಿಕ ಆಹಾರ ಮಕ್ಕಳ ಬೌತಿಕ ಬೆಳವಣಿಗೆಗೆ ಅನುಕೂಲವಾಗುತ್ತದೆ ಎಂದರು.

ಸಿಡಿಪಿಒ ಗೌತಮ ಶಿಂಧೆ ಮಾತನಾಡಿ, ಪಾಲಕರು ತಮ್ಮ ಮಕ್ಕಳಿಗೆ ಅಂಗನವಾಡಿ ಶಾಲೆಗೆ ಕಳುಹಿಸಬೇಕು. ಇಲ್ಲಿ ಸರ್ಕಾರದಿಂದ ಸಿಗುವಂತ ಎಲ್ಲ ಸೌಲಭ್ಯಗಳ ಸದುಪಯೋಗ ಪಡೆಯಬೇಕು ಎಂದು ಹೇಳಿದರು.

ಕಲಿತಾ ಟ್ರಸ್ ಜಿಲ್ಲಾ ವ್ಯವಸ್ಥಾಪಕ ಮಲ್ಲಮ್ಮ ಬಿರಾದಾರ ಪ್ರಾಸ್ತಾವಿಕ ಮಾತನಾಡಿದರು.

ಗ್ರಾಪಂ ಅಧ್ಯಕ್ಷೆ ಯಂಕಮ್ಮ ಇಸ್ಲಾಂಪುರೆ, ಕಾರ್ಯದರ್ಶಿ ಅಶೋಕ ಉಚ್ಚೇಕರ, ಸಿಸ್ಟರ್ ಜರಿನಾ, ಗ್ರಾಪಂ ಸದಸ್ಯರಾದ ಆಶಾರಾಣಿ, ಕಲ್ಪನಾ, ಚೆನ್ನಮ್ಮ ನಾರಾಯಣಪುರ, ಮುಖ್ಯಗುರುಗಳಾದ ರವಿ ಪವಾರ್, ಉಮಾ ಕುಲಕರ್ಣಿ ಹಾಗೂ ಅಂಗನವಾಡಿ ಮೇಲ್ವಿಚಾರಕಿಯರು, ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಇದ್ದರು.

ಅಂಗನವಾಡಿ ಮೇಲ್ವಿಚಾರಕಿ ಸೀಮಾ ಚಟ್ನಳ್ಳಿ ನಿರೂಪಣೆ ಮಾಡಿದರು. ನಾರಾಯಪುರ ವಲಯ ಮೇಲ್ವೀಚಾರಕಿ ಕೌಸರಬಾನು ಬಲ್ಲೂರ ವಂದಿಸಿದರು.