ಅಥಣಿ ಗ್ರಾಮೀಣ: ಮಾನವ ಕಳ್ಳ ಸಾಗಣೆಯಲ್ಲಿ ತಂತ್ರಜ್ಞಾನದ ಬಳಕೆ ಉಪಯೋಗ ಮತ್ತು ದುರುಪಯೋಗ ಕುರಿತು ಶಾಲಾ ಹಾಗೂ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಪ್ರಧಾನ ದಿವಾಣಿ ಮತ್ತು ಜೆಎಂಎಫ್ ನ್ಯಾಯಾೀಶ ಜಗದೀಶ ಬಿಸಿರೊಟ್ಟಿ ಕರೆ ನೀಡಿದರು.
ಅಥಣಿ ತಾಲೂಕಿನ ಬಡಚಿ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಪಂ, ತಾಲೂಕಾಡಳಿತ, ತಾಪಂ, ತಾಲೂಕು ಕಾನೂನು ಸೇವೆಗಳ ಸಮಿತಿ, ಅಥಣಿಯ ಶಿಸ್ತು ಅಭಿವೃದ್ಧಿ, ಸಮಾಜ ಕಲ್ಯಾಣ, ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಮಾನವ ಕಳ್ಳ ಸಾಗಣೆ ತಡೆ ದಿನಾಚರಣೆ ಹಾಗೂ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳ ಅಪಹರಣ ಹಾಗೂ ಮಾರಾಟ ಜಾಲ ಮಾಫಿಯಾದಂತೆ ಬೆಳೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು, ಚಿಕ್ಕಮಕ್ಕಳು ಮತ್ತು ಬಡವರನ್ನು ನಂಬಿಸಿ ದುಡ್ಡಿನ ಆಮಿಷವೊಡ್ಡಿ ಮಾರಾಟ ಮಾಡಲಾಗುತ್ತದೆ. ಪ್ರತಿಯೊಬ್ಬ ಪಾಲಕರು ಮಕ್ಕಳನ್ನು ತುಂಬ ಜಾಗ್ರತೆಯಿಂದ ಬೆಳೆಸಬೇಕು ಎಂದರು.
ತಾಲೂಕು ವಕೀಲ ಸಂಘದ ಅಧ್ಯಕ್ಷ ಶ್ರೀಕಾಂತ ಪೂಜಾರಿ ಮಾತನಾಡಿ, ಮಾನವ ಕಳ್ಳ ಸಾಗಣೆಯಲ್ಲಿ ದುರ್ಬಲ ಮಹಿಳೆಯರು, ಅಶಕ್ತರು ಹೆಚ್ಚು ಬಿಲಿಯಾಗುತ್ತಿದ್ದು, ಮಹಿಳೆಯರು ಎಚ್ಚೆತ್ತುಕೊಳ್ಳಬೇಕು ಎಂದರು.
ವಕೀಲರಾದ ವಿ.ಎಸ್. ಪಾಟೀಲ ಹಾಗೂ ಆರ್.ಎಲ್ ಹಳಿಂಗಳಿ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಬೀರಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಉಪತಹಸೀಲ್ದಾರ್ ಬಸವರಾಜ ಹೊಸಕೇರಿ, ತಾಪಂ ಇಒ ಈರಣ್ಣ ವಾಲಿ, ಬಸವರಾಜ ಯಾದವಾಡ, ರೇಣುಕಾ ಹೊಸಮನಿ, ಸುಜಾತಾ ಪಾಟೀಲ, ಶೋಭಾ ಮಗದುಮ್ಮ, ಶೋಭಾ ಪರೀಟ, ಜ್ಯೋತಿ ಚವ್ಹಾಣ, ವಿಜಯ ನಿಕ್ಕಂ, ಎಸ್.ಬಿ. ಮೇತ್ರಿ, ವಿಜಯ ದೇಸಾಯಿ, ಲಕ್ಷ್ಮಣ ಬಾಗೆಣ್ಣವರ, ಗ್ರಾಮಾಡಳಿತಾಕಾರಿ ಜಾವೇದ್ ಕರಜಗಿ, ಪ್ರಶಾಂತ ಬಡಿಗೇರ ಇತರರಿದ್ದರು.