ಶಹಾಬಾದ್: ರಾವೂರದ ಶ್ರೀ ಸಚ್ಚಿದಾನಂದ ಪ್ರೌಢ ಶಾಲೆಯಲ್ಲಿ ಮಕ್ಕಳ ದಿನಾಚರಣೆ ನಿಮಿತ್ತ ರಾಷ್ಟಿçÃಯ ಸಾಕ್ಷರತಾ ಕ್ಲಬ್‌ನಿಂದ ಮಕ್ಕಳ ಅಣಕು ವಿಧಾನಸಭಾ ಅಧಿವೇಶನ ಗುರುವಾರ ನಡೆಯಿತು.
ರಾಜಕಾರಣಿಗಳ ವೇಷ ತೊಟ್ಟು ಸನದಲ್ಲಿ ಸಭಾಪತಿ, ಮುಖ್ಯಮಂತ್ರಿ, ಸಚಿವರು, ಪ್ರತಿಪಕ್ಷ, ಆಡಳಿತ ಪಕ್ಷದ ಶಾಸಕರಾಗಿ ಕಲಾಪದ ಚರ್ಚೆಯಲ್ಲಿ ಪಾಲ್ಗೊಂಡು ಪ್ರಚಲಿತ ವಿಷಯಗಳ ಚರ್ಚೆ ನಡೆಸಿ, ಗಮನ ಸೆಳೆದರು.
ಅಧಿವೇಶನದಲ್ಲಿ ಬಿಸಿ ಬಿಸಿ ಚರ್ಚೆ, ಸಭಾತ್ಯಾಗ, ಸದನ ಮುಂದೂಡಿಕೆ, ಮಸೂದೆ ಮಂಡನೆ ಹೀಗೆ ಕಲಾಪದ ಎಲ್ಲ ಪ್ರಕ್ರಿಯೆಗಳನ್ನು ನಡೆಸಿ, ಮಕ್ಕಳು ತಮ್ಮ ಸಾಮರ್ಥ್ಯ ಪ್ರದರ್ಶಿಸಿ ಅತಿಥಿಗಳ ಹುಬ್ಬೆರುವಂತೆ ಮಾಡಿದರು.
ಸಭಾಪತಿ ಅರಬಿಯಾ, ಮುಖ್ಯಮಂತ್ರಿಯಾಗಿ ಅP್ಷÀತಾ, ಸಚಿವ, ಶಾಸಕರಾಗಿ ಅಂಬಿಕಾ, ಪ್ರಜ್ವಲ್, ಮಹೇಶ, ಶಂಕರ, ಸುಮಯ್ಯ, ಉ¯್ಲÁಸ, ಅರ್ಚನಾ, ಮನೋಜ, ಅಪ್ಸರಾ, ಭಾಗ್ಯಶ್ರೀ ಜವಾಬ್ದಾರಿ ನಿರ್ವಹಿಸಿದರು.
ಶ್ರೀ ಸಿದ್ಧಲಿಂಗ ಸ್ವಾಮೀಜಿ ಅಣಕು ಅಧಿವೇಶನ ಉದ್ಘಾಟಿಸಿ ಮಾತನಾಡಿ, ಪ್ರಾತ್ಯಕ್ಷಿಕೆಗಳಿಂದ ಪರಿಣಾಮಕಾರಿ ಕಲಿಕೆ ಸಾಧ್ಯ. ಇಂತಹ ಪ್ರಯತ್ನ ಹೆಚ್ಚಲಿ ಎಂದರು.
ಸAಸ್ಥೆ ಕಾರ್ಯದರ್ಶಿ ಡಾ.ಗುಂಡಣ್ಣ ಬಾಳಿ, ಸಿದ್ದಲಿಂಗ ಬಾಳಿ, ಪ್ರೌಢ ಶಾಲೆ ಸಹಶಿP್ಷÀಕರ ಸಂಘದ ಅಧ್ಯP್ಷÀ ರಾಜೇಂದ್ರ ಪ್ರಸಾದ, ಚಿದಾನಂದ ಕುಡನ, ಪ್ರಾಚಾರ್ಯ ಕಾಂತಪ್ಪ ಬಡಿಗೇರ ಇತರರಿದ್ದರು.