ಜಿಲ್ಲೆ

ಮಂದಿರಗಳಿಂದ ಭಾವೈಕ್ಯ ವೃದ್ಧಿ

ವಿಜಯಪುರ: ಮಠ&ಮಂದಿರಗಳ ಸ್ಥಾಪನೆಯಿಂದ ಜನರಲ್ಲಿ ಭಾವೈಕ್ಯ ಬೆಳೆದು ಪರಸ್ಪರ ಸೌಹಾರ್ದತೆಯಿಂದ ಬದುಕಲು ಸಾಧ್ಯವಾಗಲಿದೆ ಎಂದು ಜಿಲ್ಲಾ ಯುವ ಪರಿಷತ್​ ಅಧ್ಯ ಶರಣು ಸಬರದ ಹೇಳಿದರು.

ನಗರದ ಸಿದ್ದಾರ್ಥ ಕಾಲನಿಯಲ್ಲಿ ಮಂಗಳವಾರ ಸಿದ್ಧಿವಿನಾಯಕ ನವಗೃಹ, ನಂದೀಶ್ವರ, ಆಂಜನೇಯ ದೇವರುಗಳ ಪ್ರಾಣ ಪ್ರತಿಷ್ಠಾನ ಹಾಗೂ ಕಲಶಾರೋಹಣ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಮಹಿಳೆಯರ ಕುಂಭಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮಠ&ಮಂದಿರಗಳ ಸ್ಥಾಪನೆಯಿಂದ ಹಬ್ಬದ ವಾತಾವರಣ ನಿರ್ಮಾಣವಾಗಲಿದೆ. ಸಿದ್ಧಿವಿನಾಯಕ ದೇವಸ್ಥಾನದಲ್ಲಿ ನಂದೀಶ್ವರ, ಆಂಜನೇಯ, ವಿನಾಯಕ ನವಗೃಹ ಎಲ್ಲವೂ ಒಂದೇ ಮಂದಿರದಲ್ಲಿ ಕಾಣುವುದರಿಂದ ಭಾವೈಕ್ಯದ ಭಕ್ತಿ ಹೆಚ್ಚಾಗಲಿದೆ ಎಂದರು.

ನಗರದ ಜಿ.ಕೆ. ಪಾಟೀಲ ಸಭಾ ಭವನದಿಂದ ಸುಮಂಗಲೆಯರಿಂದ ಆರಂಭಗೊಂಡ ಕುಂಭಮೇಳ ಹಾಗೂ ಮೂರ್ತಿಗಳ ಮೆರವಣಿಗೆ ಸಿದ್ದಾರ್ಥ ನಗರದವರೆಗೂ ನಡೆಯಿತು.

ದೇವಸ್ಥಾನ ಸಮಿತಿ ಉಪಾಧ್ಯ ಭೀಮನಗೌಡ ಸಿದರೆಡ್ಡಿ, ನೀಲಕುಮಾರ ಪತ್ತೆಪುರಮಠ, ಶೋಭಾ ಜಗತಾಪ, ಶಿವಕುಮಾರ ಏಗಶೆಟ್ಟಿ, ಪವಿತ್ರಾ ಬೋಸಲೆ, ವೀರಭದ್ರಪ್ಪ ಹಲಕಾವಟಗಿ, ಅರವಿಂದ ಹಂಗರಗಿ, ನಾಗೇಂದ್ರ ಸಿನ್ನೂರ, ಬಿ.ಎಸ್​. ಸಾವಳಗಿ ಮತ್ತಿತರರಿದ್ದರು.

ಪೋಟೋ : ಎಂಎಂ 13&8

ವಿಜಯಪುರದ ಸಿದ್ದಾರ್ಥ ಕಾಲನಿಯಲ್ಲಿ ಹಮ್ಮಿಕೊಂಡಿದ್ದ ಸಿದ್ಧಿವಿನಾಯಕ ದೇವಸ್ಥಾನದ ಪ್ರಾಣ ಪ್ರತಿಷ್ಠಾನ ಅಂಗವಾಗಿ ಹಮ್ಮಿಕೊಂಡಿದ್ದ ಕುಂಭಮೇಳಕ್ಕೆ ಶರಣು ಸಬರದ ಚಾಲನೆ ನೀಡಿದರು. ಭೀಮನಗೌಡ ಸಿದರೆಡ್ಡಿ, ನೀಲಕುಮಾರ ಪತ್ತೆಪುರಮಠ ಮತ್ತಿತರರಿದ್ದಾರೆ.