ಮಂಗಳೂರು: ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ಅಧಿನಿಯಮದಡಿ ಮಂಗಳೂರು ವಿಶ್ವವಿದ್ಯಾನಿಲಯದ ಸಂಯೋಜನೆಗೊಳಪಟ್ಟಿರುವ ಎಲ್ಲ ಕಾಲೇಜು/ವಿದ್ಯಾಸಂಸ್ಥೆಗಳಿಂದ ಶೈಕ್ಷಣಿಕ ವರ್ಷ 2021-22 ನೇ ಸಾಲಿಗೆ ಶಾಶ್ವತ/ಮುಂದುವರಿಕೆ/ವಿಸ್ತರಣಾ ಮತ್ತು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿರುವ ಆಸಕ್ತ ಸಂಸ್ಥೆಗಳಿಂದ ಹೊಸ ಸಂಯೋಜನೆ ಕುರಿತು ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಗಳನ್ನು www.onlineaffiliation.karnataka.gov.in ಪೋರ್ಟಲ್ ಮೂಲಕ ಜುಲೈ 8, 2021 ಒಳಗಾಗಿ ಸಲ್ಲಿಸಬಹುದು. ಅರ್ಜಿಶುಲ್ಕ ರೂ.1000 ಪಾವತಿಸಿ (ಡಿಡಿ/ ಚಲನ್/ ಆರ್‌ಟಿಜಿಎಸ್) ಅರ್ಜಿ ಪ್ರತಿಯನ್ನು ಕುಲಸಚಿವರ ಕಚೇರಿಗೆ ಸಲ್ಲಿಸಲು ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗೆ ವಿಶ್ವವಿದ್ಯಾನಿಲಯದ ವೆಬ್‌ಸೈಟ್- www.mangaloreuniversity.ac.in ಗೆ ಭೇಟಿ ನೀಡಬಹುದು ಎಂದು ಕುಲಸಚಿವರ ಪ್ರಕಟಣೆ ತಿಳಿಸಿದೆ.