ಮಂಗಳೂರು: ನಗರದಲ್ಲಿ ಲಾಕ್ ಡೌನ್ ವಿನಾಯಿತಿ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ರಸ್ತೆಗಿಳಿದ ಪರಿಣಾಮ ವಾಹನ ದಟ್ಟಣೆ ಉಂಟಾಯಿತು. ಲಾಕ್ ಡೌನ್ ಅವಧಿಯಲ್ಲಿ ಕೆಲವು ಮುಖ್ಯ ರಸ್ತೆಗಳಲ್ಲಿ ಒಂದು ರಸ್ತೆಯನ್ನು ಮುಚ್ಚಿ ಇನ್ನೊಂದು ರಸ್ತೆಯಲ್ಲಿ ದ್ವಿಪಥ ಸಂಚಾರಕ್ಕೆ ಅವಕಾಶ ಕಲ್ಪಿಸಿದ ಪರಿಣಾಮ ಸಮಸ್ಯೆ ಉಂಟಾಯಿತು.
ಕಂಕನಾಡಿ, ವೆಲೆನ್ಸಿಯಾ, ಮಲ್ಲಿಕಟ್ಟೆ, ಲಾಲ್ ಭಾಗ್ ಮೊದಲಾದ ಕಡೆ ಒಂದು ಕಿ.ಮೀ.ಸಂಚರಿಸಲು ಒಂದು ತಾಸು ಬೇಕಾಯಿತು. ಈ ನಡುವೆ ಬಂದ ಆಂಬುಲೆನ್ಸ್ ಗಳು ವಾಹನ ದಟ್ಟಣೆ ನಡುವೆ ಸಿಲುಕಿಕೊಂಡವು. ಎಲ್ಲಿಯೂ ಸಂಚಾರಿ ಪೊಲೀಸರು ಇಲ್ಲದ ಕಾರಣ ದಟ್ಟಣೆ ನಿರ್ವಹಣೆ ಸಾಧ್ಯವಾಗಿಲ್ಲ.
ನಗರ ಮಾತ್ರವಲ್ಲದೆ ಹೊರವಲಯದ ತೊಕ್ಕೊಟ್ಟು, ದೇರಳಕಟ್ಟೆ, ಸುರತ್ಕಲ್, ಕಾವೂರು ಮೊದಲಾದ ಕಡೆಗಳಲ್ಲೂ ವಾಹನ ದಟ್ಟಣೆ ಉಂಟಾಗಿದೆ.