ಜಿಲ್ಲೆ

ಮಂಗಳೂರು ಕಂಬಳಕ್ಕೆ ಚಾಲನೆ

ಮಂಗಳೂರು: ನಗರದ ಬಂಗ್ರ ಕೂಳೂರಿನಲ್ಲಿ ರಾಮ ಲಕ್ಷ್ಮಣ ಜೋಡು ಕರೆ ಕಂಬಳಕ್ಕೆ ಶನಿವಾರ ಬೆಳಗ್ಗೆ ಚಾಲನೆ ನೀಡಲಾಯಿತು.

ಕಂಕನಾಡಿ ಗರೋಡಿ ಕ್ಷೇತ್ರದ ಚಿತ್ತರಂಜನ್ ಕಂಬಳಕ್ಕೆ ಚಾಲನೆ ನೀಡಿದರು. ಕದ್ರಿ ಜೋಗಿ ಮಠದ ನಿರ್ಮಲ್ ನಾಥ್, ರಾಮಕೃಷ್ಣ ಮಠದ ಶ್ರೀ ಏಕಗಮ್ಯಾನಂದ ಸ್ವಾಮೀಜಿ ಮೊದಲಾದವರು ಉಪಸ್ಥಿತರಿದ್ದರು.

ಕಂಬಳದಲ್ಲಿ ಸುಮಾರು 120 ಜೋಡಿ ಕಂಬಳದ ಕೋಣಗಳು ಭಾಗವಹಿಸುವ ನಿರೀಕ್ಷೆ ಇದೆ. ಇದರ ಜತೆಗೆ ಸಾರ್ವಜನಿಕರಿಗೆ ಛಾಯಾಚಿತ್ರ ಹಾಗೂ ವರ್ಣಚಿತ್ರ ಸ್ಪರ್ಧೆ ಆಯೋಜಿಸಲಾಗಿದೆ.