ಜಿಲ್ಲೆ

ಮಂಗಳೂರು ಏರ್‌ಪೋರ್ಟ್‌ನಲ್ಲಿ 11 ಲಕ್ಷ ವೌಲ್ಯದ ಅಕ್ರಮ ಚಿನ್ನ ಪತ್ತೆ

ಗುಜರಾತ್ ನ ಖಾಸೀಂ ಇಬ್ರಾಹಿಂ ಮತ್ತು ಭಟ್ಕಳದ ಮಹಮ್ಮದ್ ಬಶೀರ್ ಬಂಧಿತರು. ಮೇಕಪ್ ಬಾಕ್ಸ್ ನಲ್ಲಿ ಹಾಗೂ ಚಿನ್ನದ ಪೌಡರನ್ನು ಕೈ ಅಡಿಯಲ್ಲಿ ಇಟ್ಟು ಸಾಗಾಟ ಮಾಡಿದ್ದರು. ತಪಾಸಣೆ ವೇಳೆ ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

ಮಂಗಳೂರು: ಇಲ್ಲಿನ ಬಜ್ಪೆಯ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 11 ಲಕ್ಷ ರೂ. ವೌಲ್ಯದ 238 ಗ್ರಾಂ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದು, ಇಬ್ಬರು ಪ್ರಯಾಣಿಕರನ್ನು ಬಂಧಿಸಿದ್ದಾರೆ.