ಜಿಲ್ಲೆ

ಮಂಗಳೂರಿನ ಏಳು ಈಜು ಪಟುಗಳು ರಾಷ್ಟ್ರಮಟ್ಟಕ್ಕೆ

ಮಂಗಳೂರು: ಬೆಂಗಳೂರಿನ ಬಸವನಗುಡಿಯಲ್ಲಿ ಅಕ್ಟೋಬರ್ 9 ಮತ್ತು 10 ರಂದು ನಡೆದ ರಾಜ್ಯಮಟ್ಟದ ಶಾಲಾ ಮಟ್ಟದ ಈಜು ಸ್ಪರ್ಧೆಯಲ್ಲಿ ಮಂಗಳೂರಿನ ವಿ ಒನ್ ಎಕ್ವ ಸೆಂಟರ್ ನಲ್ಲಿ ತರಬೇತಿ ಪಡೆದ ವಿವಿಧ ಶಾಲಾ ವಿದ್ಯಾರ್ಥಿಗಳು ಒಟ್ಟು ಹದಿನಾಲ್ಕು ಚಿನ್ನ ಆರು ಬೆಳ್ಳಿ ಹಾಗೂ ಎಂಟು ಕಂಚಿನ ಪದಕ ಗಳಿಸಿದ್ದಾರೆ .
ಗ್ರಹಿತ್ ಜಿ ಪ್ರಭು, ನೈತಿಕ್ ಯನ್, ಪ್ರಹ್ಲಾದ್ ಶೆಟ್ಟಿ, ರಿಯಾನಾ ದೃತಿ ಫರ್ನಾಂಡಿಸ್, ಭೂಮಿ, ಶ್ರಾವ್ಯ ಕೆ, ರೆಬೆಕಾ ಮರಿಯಾ ಡಿ ಕುನ್ಹ ಇವರು ರಾಜ ಕೋಟ್ ನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಈಜು ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ವಿಜೇತರ ವಿವರ ಈ ರೀತಿ ಇದೆ
ಗ್ರಹಿತ್ ಜಿ ಪ್ರಭು ಒಂದು ಬೆಳ್ಳಿ ಎರಡು ಕಂಚು.
ನೈತಿಕ ಎನ್ ಒಂದು ಚಿನ್ನ, ನಾಲ್ಕು ಕಂಚು .
ಪ್ರಹ್ಲಾದ್ ಶೆಟ್ಟಿ ಎರಡು ಬೆಳ್ಳಿ .
ರಿಯಾನಾ ಧೃತಿ ಫರ್ನಾಂಡಿಸ್ ಮೂರು ಚಿನ್ನ, ಎರಡು ಬೆಳ್ಳಿ .
ಭೂಮಿ ಒಂದು ಚಿನ್ನ.
ಹವೀಶ್ ಗಟ್ಟಿ ಒಂದು ಚಿನ್ನ, ಒಂದು ಬೆಳ್ಳಿ, ಒಂದು ಕಂಚು.
ಶ್ರಾವ್ಯಾಕೆ ನಾಲ್ಕು ಚಿನ್ನ ಒಂದು ಕಂಚು .
ರೆಬೆಕ ಮರಿಯಾ ಡಿ ಕುನ್ಹ ನಾಲ್ಕು ಚಿನ್ನ
ಅನನ್ಯ ಒಂದು ಕಂಚು .
ಪದಕ ವಿಜೇತರು ಮುಖ್ಯ ತರಬೇತುದಾರರಾದ ಲೋಕರಾಜ್ ವಿಟ್ಲ ಸ್ಯಾಂಜೋ ಕೆಪಿ, ಸ್ಕಂದ, ಇವರಲ್ಲಿ ತರಬೇತಿ ಪಡೆದಿದ್ದರು .
ಇವರಿಗೆ ವಿವನ್ ಅಕ್ವಾ ಸೆಂಟರ್ ನ ನಿರ್ದೇಶಕರಾದ ನವೀನ್ ಹಾಗೂ ರೂಪ ಜಿ ಪ್ರಭು ಅಭಿನಂದನೆಯನ್ನು ತಿಳಿಸಿದ್ದಾರೆ