ಜಿಲ್ಲೆ

ಮಂಗಳೂರಲ್ಲಿ‌‌ ಮತ್ತೆ ಅನೈತಿಕ ಪೊಲೀಸ್‌ಗಿರಿ ಇಬ್ಬರ ಬಂಧನ

reportermng

ಮಂಗಳೂರು: ಮಂಗಳೂರಲ್ಲಿ ಅನೈತಿಕ ಪೊಲೀಸ್‌ಗಿರಿ ಮತ್ತೆ ಮುಂದುವರಿದಿದೆ. ಕದ್ರಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಅನೈತಿಕ ಪೊಲೀಸ್‌ಗಿರಿಗೆ ಸಂಬಂಧಪಟ್ಟಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಬುಧವಾರ ಸಂಜೆ ಕದ್ರಿ ಠಾಣಾ ವ್ಯಾಪ್ತಿಯ ಖಾಸಗಿ ಕಾಲೇಜೊಂದರ ಸಮೀಪದಲ್ಲಿ ಯುವ ಜೋಡಿಯೊಂದು ನಿಂತಿತ್ತು. ಈ ವೇಳೆ ದಾಳಿ‌ ನಡೆಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು ಜೋಡಿಗೆ ಥಳಿಸಿ, ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ.

ಯುವ ಜೋಡಿಯು ಹಿಂದೂ ಸಂಘಟನೆ ಕಾರ್ಯಕರ್ತರು ತಮ್ಮನ್ನು ಥಳಿಸಿ, ಇಲ್ಲಿಗೆ ಕರೆತಂದಿದ್ದಾರೆ ಎಂದು ಆರೋಪಿಸಿ ಪ್ರಕರಣ ದಾಖಲಿಸಿದ್ದಾರೆ.

ಯುವ ಜೋಡಿ ರಾಸಲೀಲೆಯಲ್ಲಿ ತೊಡಗಿತ್ತು ಎಂದು ಹಿಂದೂ ಸಂಘಟನೆಯ ಕಾರ್ಯಕರ್ತರು ಆರೋಪಿಸಿದ್ದಾರೆ.

ಯುವ ಜೋಡಿಯ ಥಳಿಸಿದ ಆರೋಪದಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆ ಉದ್ದೇಶದಿಂದ ಆರೋಪಿಗಳ ಹೆಸರನ್ನು ಬಹಿರಂಗಪಡಿಸಿಲ್ಲ.

ಈ ಬಗ್ಗೆ ಮಂಗಳೂರು ಪೂರ್ವ (ಕದ್ರಿ) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.