ಬಾಗಲಕೋಟೆ: ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಮಂಗಳಗುಡ್ಡದಲ್ಲಿ ಏ.೮ ರಿಂದ ನಡೆಯುವ ಮಂಗಳಾದೇವಿ ಜಾತ್ರೆಯಲ್ಲಿ ಪ್ರಾಣಿಗಳ ಬಲಿಯನ್ನು ತಡೆಯಲು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿಯ ದಯಾನಂದ ಸ್ವಾಮೀಜಿ ಆಗ್ರಹಿಸಿದರು.
ನಗರದ ಪ್ರೇಸ್‌ಕ್ಲಬ್‌ನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾಣಿ ಬಲಿ ಮುಕ್ತ ಕರ್ನಾಟಕವಾಗಬೇಕು ಎಂದು ಕಾಯ್ದೆ ಜಾರಿಯಲ್ಲಿದ್ದರೂ ಹಲವಾರು ಕಡೆ ಜಾತ್ರೆಯ ನೆಪದಲ್ಲಿ ಧಾರ್ಮಿಕ ಕ್ಷೇತ್ರಗಳಲ್ಲಿ ಪ್ರಾಣಿಗಳ ಬಲಿ ನಿರಂತರವಾಗಿ ನಡೆಯುತ್ತಿದೆ. ಸರ್ಕಾರ ಇದರ ಬಗ್ಗೆ ಗಂಭೀರವಾಗಿ ಕ್ರಮ ಕೈಗೊಳ್ಳಬೇಕು ಎಂದರು.
ನಮ್ಮ ಸಂಸ್ಥೆಯಿAದ ಒಂದು ಸಾವಿರ ಸ್ಥಳಗಳಲ್ಲಿ ಅಂದಾಜು ೪ ಕೋಟಿ ರೂ. ಹೆಚ್ಚು ಪ್ರಾಣಿಗಳ ಬಲಿಯಾಗುವುದನ್ನು ತಡೆದಿದ್ದೇವೆ. ಹೀಗಾಗಿ ಏ.೮ ರಿಂದ ೧೦ ವರೆಗೆ ಮಂಗಳಗುಡ್ಡದಲ್ಲಿ ನಡೆಯುವ ಜಾತ್ರೆಯಲ್ಲಿ ಸಾವಿರಾರು ಪ್ರಾಣಿಗಳ ಬಲಿ ನಡೆಯಲಿದ್ದು, ಇದನ್ನು ತಡೆಯಲು ಸರ್ಕಾರ ಗಂಭಿರವಾದ ಕ್ರಮ ಕೈಗೊಳ್ಳಬೇಕು. ಈಗಾಗಲೇ ಜಿಲ್ಲಾಽಕಾರಿಗಳ ಪ್ರಾಣಿ ಬಲಿ ಮಾಡಬಾರದು ಎಂದು ಆದೇಶ ಹೊರಡಿಸಿದ್ದು, ಇದನ್ನು ಕಟ್ಟುನಿಟ್ಟಾಗಿ ಪಾಲನೆಯಾಗಬೇಕು ಎಂದು ಹೇಳಿದರು.
ಜಾತ್ರೆ ಮುಂಚೆಯೇ ಪ್ರತಿಯೊಂದು ಚೆಕ್‌ಪೋಸ್ಟ್ಗಳಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯ ಮುಂಜಾಗೃತೆ ಕೈಗೊಂಡರೆ ಪ್ರಾಣಿಗಳ ಬಲಿಯಾಗುವುದನ್ನು, ಇದರಿಂದ ಕೂಡ ತಡೆಯಲು ಸಾಧ್ಯವಿದೆ. ಈ ಬಗ್ಗೆ ಎಸ್ಪಿಯವರು ಹೆಚ್ಚು ಕಾಳಜಿಯನ್ನು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಭಕ್ತರು ಆಚರಣೆ ಮಾಡುವ ಧಾರ್ಮಿಕ ಆಚರಣೆಗಳಿಗೆ ತಮ್ಮದು ವಿರೋಧವಿಲ್ಲ. ಆದರೆ ಕಾನೂನು ಉಲ್ಲಂಘಿಸಿ ಆಚರಣೆಗಳನ್ನು ಮಾಡಬಾರದು. ಮಂಗಳಗುಡ್ಡದ ಜಾತ್ರೆಯಲ್ಲಿ ಪ್ರಾಣಿಗಳ ಬಲಿಯಾಗುವುದನ್ನು ತಡೆಯಲು ಬಾಗಲಕೋಟೆ ಜಿಲ್ಲಾಡಳಿತ ಭವನದಿಂದ ಜನಜಾಗೃತಿ ಯಾತ್ರೆಯನ್ನು ಹಮ್ಮಿಕೊಂಡು ಮಂಗಳಗುಡ್ಡ ಗ್ರಾಮದ ಸುತ್ತಮುತ್ತ ಪ್ರಾಣಿಗಳ ಬಲಿ ಕೊಡಬೇಡಿ ಎಂದು ತಿಳುವಳಿಕೆ ನೀಡಲಾಗುವುದು ಎಂದು ತಿಳಿಸಿದರು.