ಹುಬ್ಬಳ್ಳಿ: ಬೈಕ್‌ನಲ್ಲಿ ಬಂದ ಕಳ್ಳರಿಬ್ಬರು ವಾಕಿಂಗ್ ಮಾಡುತ್ತಿದ್ದ ಮಹಿಳೆಯ ಕೊರಳಲ್ಲಿದ್ದ ಮಂಗಳಸೂತ್ರ ಕಿತ್ತುಕೊಂಡು ಪರಾರಿಯಾದ ಘಟನೆ ಇಲ್ಲಿಯ ಕೇಶ್ವಾಪುರದ ಅಂಬಿಕಾನಗರದ ಪ್ರಸನ್ನ ಗಣಪತಿ ಗುಡಿ ಹತ್ತಿರ ನಡೆದಿದೆ.
ಸಂಜೆ ವೇಳೆ ಸಾಕು ನಾಯಿಯೊಂದಿಗೆ ಮಹಿಳೆ ವಾಕ್ ಮಾಡುತ್ತಿದ್ದಳು. ಬೈಕ್‌ನಲ್ಲಿ ಬಂದು ಕೊರಳಲ್ಲಿದ್ದ 24 ಗ್ರಾಂ ತೂಕದ 80 ಸಾವಿರ ರೂ. ಮೌಲ್ಯದ ಮಂಗಳಸೂತ್ರ ಕಿತ್ತುಕೊಂಡು ಪರಾರಿಯಾಗಿದ್ದಾರೆ ಮಹಿಳೆಯು ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.