ಚಾಮರಾಜನಗರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ರಂಗ ದೇಗುಲ ಕಲಾವೇದಿಕೆ ಸಹಯೋಗದಲ್ಲಿ ದೌರ್ಜನ್ಯ ಪ್ರತಿಬಂಧ ಹಾಗೂ ಅಸ್ಪೃಶ್ಯತಾ ನಿರ್ಮೂಲನ ಸಂಬಂಧ ಸೋಮವಾರ ಬೀದಿ ನಾಟಕ ಪ್ರದರ್ಶನ ಮಾಡಲಾಯಿತು.
ತಾಲೂಕಿನ ಮಂಗಲ ಗ್ರಾಮದಲ್ಲಿರುವ ಗ್ರಾಮ ಪಂಚಾಯಿತಿ ಆವರಣದಲ್ಲಿ ಬೀದಿ ನಾಟಕವನ್ನು ಪ್ರದರ್ಶನ ಮಾಡುವ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ಯಜಮಾನರು ಹಾಗೂ ಹಲವಾರು ಮುಖಂಡರು ತಮಟೆ ಭಾರಿಸುವ ಮೂಲಕ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿದರು.
ಬಳಿಕ ಪ್ರಾರಂಭವಾದ ಬೀದಿ ನಾಟಕ ದೌರ್ಜನ್ಯ ಪ್ರತಿಬಂಧ ಹಾಗೂ ಅಸ್ಪೃಶ್ಯತಾ ನಿರ್ಮೂಲನೆಯ ಕುರಿತು ಹಲವಾರು ವಿಚಾರಗಳನ್ನು ಸಾರಿತು. ಕಾರ್ಯಕ್ರಮದಲ್ಲಿ ರಂಗ ದೇಗುಲ ಕಲಾವೇದಿಕೆ ಅಧ್ಯಕ್ಷ ಶಾಂತರಾಜು, ಸಿದ್ದರಾಜು, ರವಿ, ಭಾಗ್ಯ,ಮಹೇಶ್, ಸುರೇಶ್, ಎಸ್.ಗುರುರಾಜು ಹಾಗೂ ಇತರರು ಹಾಜರಿದ್ದರು.