ಬಾಗಲಕೋಟೆ: ಮಹಾಲಿಂಗಪುರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಭ್ರೂಣಲಿಂಗ ಪತ್ತೆ ನಡೆಯುತ್ತಿದೆ ಎಂದು ಜಿಲ್ಲಾ ಆರೋಗ್ಯಾಽಕಾರಿಗಳೆ ದಾಳಿ ನಡೆಸಿ ಸೀಜ್ ಮಾಡಿ ಈಗ ದೂರು ದಾಖಲಿಸಲು ಹಿಂದೇಟು ಹಾಕುತ್ತಿರುವುದು ಏಕೆ ಎಂದು ಜಯ ಕರ್ನಾಟಕ ಜನಪರ ವೇದಿಕೆ ಬೆಳಗಾವಿ ಜಿಲ್ಲಾಧ್ಯಕ್ಷ ಶಿವರೆಡ್ಡಿ ಉತ್ತರಡ್ಡಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ.ರಾಜೇಂದ್ರ ಪಾಟೀಲ ಅವರ ಆಸ್ಪತ್ರೆಯಲ್ಲಿ ಭ್ರೂಣಲಿಂಗ ಪತ್ತೆ ನಡೆಯುತ್ತಿದೆ ಎಂದು ದಾಳಿ ಮಾಡಲಾಗಿತ್ತು. ಅದರಂತೆ ಯಂತ್ರೋಪಕರಣವಿದ್ದ ಕೊಠಡಿಯನ್ನು ಆರೋಗ್ಯಾಽಕಾರಿ ಸೀಜ್ ಮಾಡಿದ್ದರು. ನಂತರ ಅವರು ದೂರು ನೀಡಲು ಹಿಂದೇಟು ಹಾಕುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಽಕಾರಿ ಕೆ.ಎಂ.ಜಾನಕಿ ಅವರಿಗೆ ದೂರು ಸಲ್ಲಿಸಿ ಕ್ರಮಕ್ಕೆ ೮ ದಿನಗಳ ಗಡುವು ನೀಡುತ್ತೇವೆ. ಶಿಸ್ತು ಕ್ರಮ ಆಗದಿದ್ದರೇ ಹೋರಾಟ ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.
ಸಂಘಟನೆಯ ಬಾಗಲಕೋಟೆ ಜಿಲ್ಲಾಧ್ಯಕ್ಷೆ ಶೋಭಾ ಬಂಡಿವಡ್ಡರ, ಲಕ್ಷ÷್ಮಣ ಮೆಳ್ಳಿಗೇರಿ, ಸುಜಾತಾ ಬಂಡಿವಡ್ಡರ, ಮಹಾಲಿಂಗ ಅಂಬಲಜರಿ ಇದ್ದರು.