filter: 101; fileterIntensity: 0.8; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.5928571, 0.51267856);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 44; 
ಜಿಲ್ಲೆ

ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ಸಮಿತಿ ರಚನೆ

ಚಿತ್ರದುರ್ಗ: ಅನ್ಯಾಯ, ಭ್ರಷ್ಟಾಚಾರದ ವಿರುದ್ಧ ಹೋರಾಡಲು ಜನಹಿತ ಹಿರಿಯ ನಾಗರಿಕರ ಹೋರಾಟ ಸಮಿತಿ ಸ್ಥಾಪನೆಯಾಗಿದೆ ಎಂದು ಸಮಿತಿಯ ಅಧ್ಯಕ್ಷ ಪಿ.ಈ.ವೆಂಕಟಸ್ವಾಮಿ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚಿತ್ರದುರ್ಗದಲ್ಲಿ ಕಲುಷಿತ ವಾತಾವರಣ ನಿರ್ಮಾಣವಾಗಿದೆ. ಅನೇಕ ರೋಗಿಗಳು ಚಿಕಿತ್ಸೆ ಸಿಗದೆ ಪರದಾಡುತ್ತಿದ್ದಾರೆ. ಹೀಗಾಗಿ ಸಾಮಾಜಿಕ ಕಳಕಳಿಯೊಂದಿಗೆ ಮೂರು ತಿಂಗಳ ಹಿಂದೆ ಸಮಿತಿ ರಚಿಸಿ ನೋಂದಾಯಿಸಲಾಗಿದೆ ಎಂದರು.

ನಗರದ ಹಲವೆಡೆಗಳಲ್ಲಿ ಮೂಲಸೌಲಭ್ಯಗಳಾದ ಕುಡಿಯುವ ನೀರು, ಬೀದಿ ದೀಪ, ಸ್ವಚ್ಛತೆ ಮರೀಚಿಕೆಯಾಗಿದೆ. ಸರ್ಕಾರಿ ಕಚೇರಿಗಳಲ್ಲಿ ಲಂಚವಿಲ್ಲದೆ, ಕೆಲಸಗಳಾಗುವುದಿಲ್ಲ ಎಂದು ದೂರಿದರು.

ಚಳ್ಳಕೆರೆ ಗೇಟ್‌ನಲ್ಲಿ ಜನಸಂದಣಿ ಹಾಗೂ ವಾಹನಗಳ ದಟ್ಟಣೆ ಹೆಚ್ಚಿದ್ದು, ಅಲ್ಲಿ ಸಾರ್ವಜನಿಕ ಶೌಚಗೃಹ ನಿರ್ಮಾಣವಾಗಬೇಕು. ಶನಿದೇವರ ಸನ್ನಿಧಾನದ ರಸ್ತೆ ಅದ್ವಾನವಾಗಿದ್ದು, ಕೂಡಲೇ ದುರಸ್ತಿಗೆ ಮುಂದಾಗಬೇಕೆಂದು ಒತ್ತಾಯಿಸಿದರು.

ಸಮಿತಿ ಕಾರ್ಯದರ್ಶಿ ವೈ.ಕೆ.ಮಹಾಸ್ವಾಮಿ, ನಿರ್ದೇಶಕರಾದ ಎಚ್.ಕನಕದಾಸ್, ಜಿ.ಟಿ.ಲಕ್ಷ್ಮಿನಾರಾಯಣಸ್ವಾಮಿ, ಹನುಮಂತರೆಡ್ಡಿ, ಈಶ್ವರಪ್ಪ ಇತರರಿದ್ದರು.