ಜಿಲ್ಲೆ

ಭ್ರಷ್ಟಾಚಾರ ನಿಗ್ರಹದ ಬಗ್ಗೆ ಅರಿವು ಮೂಡಿಸುವ ಕೆಲಸ ಆಗಬೇಕು: ನಂದಿನಿ

ಹಾಸನ: ಭ್ರಷ್ಟಾಚಾರ ನಿಗ್ರಹದ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಅ.28ರಿಂದ ನ.3ರ ವರೆಗೆ ದೇಶಾದ್ಯಂತ ಮಾಡಲಾಗುತ್ತದೆ ಎಂದು ಜಿಲ್ಲಾ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ನಂದಿನಿ ತಿಳಿಸಿದರು.

ನಗರದ ಜಿಲ್ಲಾ ರೆಡ್ ಕ್ರಾಸ್ ಭವನದಲ್ಲಿ ಜಿಲ್ಲಾ ಲೋಕಾಯುಕ್ತ ಸಂಸ್ಥೆ, ಜಿಲ್ಲಾ ರೆಡ್ ಕ್ರಾಸ್, ಸೆಂಟ್ರಲ್ ಕಾಮರ್ಸ್ ಕಾಲೇಜು ಇವರು ಸಂಯುಕ್ತಾಶ್ರಯದಲ್ಲಿ ಬುಧವಾರ ರಾಪ್ಟ್ರೀಯ ಜಾಗರೂಕತೆ ಅರಿವು ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾರ್ವಜನಿಕರು ವಿದ್ಯಾರ್ಥಿಗಳು ಹಾಗೂ ಸಂಘ ಸಂಸ್ಥೆಗಳಿಗೆ ಜಾಗೃತಿ ಮೂಡಿಸುವ ಮೂಲಕ ಅವರಿಗೆ ಮನವರಿಕೆ ಮಾಡಿಸಬೇಕು.ಮತ್ತು ಲಂಚ ಪಡೆಯುವುದು ಹಾಗೂ ಲಂಚ ನೀಡುವುದು ಎರಡು ನಡವಳಿಕೆಗಳು ತಪ್ಪು ಎಂಬ ತಿಳುವಳಿಕೆ ಮೂಡಿಸುವುದು ನಮ್ಮ ಜವಾಬ್ದಾರಿ ಎಂದು ಹೇಳಿದರು. ಕಡೆಯಲ್ಲಿ ವಿದ್ಯಾರ್ಥಿಗಳು ಹಾಗೂ ಎಲ್ಲಾ ಅತಿಥಿಗಳಿಗೆ ಪ್ರತಿಜ್ಞಾವಿಧಿಯನ್ನು ಭೋಧಿಸಿದರು.

ಆಯುರ್ವೇದ ಕಾಲೀಜಿನ ಪ್ರಾಂಶುಪಾಲ ಡಾ.ಪ್ರಸನ್ನ ಎನ್.ರಾವ್ ಮಾತನಾಡಿ, ಸದಾಚಾರವನ್ನು ಬಿಟ್ಟು ಭಿನ್ನ ಆಚಾರವನ್ನು ಪಾಲಿಸಿದರೆ ಅದು ಭ್ರಷ್ಟಾಚಾರವಾಗುತ್ತದೆ. ವಿದ್ಯಾರ್ಥಿಗಳು ಕಾಲೇಜು ಅವಧಿಯಿಂದ ಭ್ರಷ್ಟಾಚಾರ ವಿರುದ್ಧ ಎಚ್ಚರಗೊಂಡರೆ ದೇಶವು ಇನ್ನೂ ಹೆಚ್ಚಿನ ಪ್ರಗತಿ ಸಾಧಿಸಲು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಸಭಾಪತಿ ಹೆಮ್ಮಿಗೆ ಮೋಹನ್,ಶಬ್ಬೀರ್ ಅಹಮದ್, ಜಯೇಂದ್ರಕುಮಾರ್, ಡಾ.ವೀರಭದ್ರಪ್ಪ, ಶಿಲ್ಪಾ, ಬಾಲು, ಗಿರಿಗೌಡರು, ಪ್ರಾಂಶುಪಾಲ ಚಂದ್ರಕಾಂತ್ ಪಡೆಸೂರು, ಎಸ್.ಎಸ್.ಪಾಷ, ಅಮಜಾದ್ ಖಾನ್, ಕೆ.ಟಿ.ಜಯಶ್ರೀ, ಭೀಮ್‌ರಾಜ್, ಮಂಜಪ್ಪ ಗೌಡರು, ಭಾನುಮತಿ ಇತರರು ಇದ್ದರು.