ಆಳಂದ: ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಹಾಗೂ ಕಚೇರಿಗಳ ಆಡಳಿತಕ್ಕೆ ಸಾರ್ವಜನಿಕರಿಂದ ಸಹಕಾರ ಅಗತ್ಯ ಎಂದು ಲೋಕಾಯುಕ್ತ ಸಿಪಿಐ ಅರುಣ ಮುರಗುಂಡಿ ಅವರು ತಿಳಿಸಿದರು.
ಪಟ್ಟಣದ ಆಡಳಿತ ಸೌಧದಲ್ಲಿ ಮಂಗಳವಾರ ಏರ್ಪಡಿಸಿದ್ದ ಭ್ರಷ್ಟಾಚಾರ ವಿರುದ್ಧ ಜಾಗೃತಿ ಅರಿವು ಸಪ್ತಾಹದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರಿ ನೌಕರರು ಸಾರ್ವಜನಿಕರಿಗೆ ನಿಗದಿತ ಸಮಯದಲ್ಲಿ ಕೆಲಸ ಮಾಡಿಕೊಡಬೇಕು. ಅಗೌರವದಿಂದ ನಡೆದುಕೊಳ್ಳಬಾರದು. ಭ್ರಷ್ಟಾಚಾರದಲ್ಲಿ ತೊಡಗಬೇಡಿ. ನಿಗದಿತ ನೆಮ್ಮದಿ ಜೀವನ ದೊರೆಯುತ್ತದೆ ಎಂದು ಹೇಳಿದರು.
ಜನರಲ್ಲಿ ಸರ್ಕಾರದ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಸರ್ಕಾರ ಸದಾ ಜನರಿಗಾಗಿ ಶ್ರಮಿಸುತ್ತಿದೆ. ಯಾವುದೇ ಸೇವೆ ಪಡೆಯಲು ಸಾರ್ವಜನಿಕರು ಸಕಾಲದಲ್ಲಿ ಅರ್ಜಿ ಸಲ್ಲಿಸಬೇಕು. ಸೇವೆ ಒದಗಿಸದಿದ್ದರೆ ಅಪರಾಧವಾಗುತ್ತದೆ. ನ್ಯಾಯಾಂಗಕ್ಕೆ ಶಿಕ್ಷೆ ನೀಡುವ ಅವಕಾಶವಿದೆ ಎಂದರು.
ಪಟ್ಟಣದ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಕ್ಕೆ ಭೇಟಿ ನೀಡಿ, ಭ್ರಷ್ಟಾಚಾರ ತಡೆಯಲು ಯುವ ಪೀಳಿಗೆ ಜಾಗೃತರಾಗಿರಬೇಕು ಎಂದು ಸಲಹೆ ನೀಡಿದರು. ವಸತಿ ನಿಲಯದಲ್ಲಿ ವಿದ್ಯಾರ್ಥಿಗಳ ಜತೆಗೂಡಿ ಊಟ ಮಾಡಿದರು.
ಗ್ರೇಡ್-2 ತಹಸೀಲ್ದಾರ್ ಭೀಮಣ್ಣ ಕುದ್ರಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ವಿಜಯಲಕ್ಷಿö್ಮÃ, ವ್ಯವಸ್ಥಾಪಕ ಸತೀಶ ದಳಪತಿ, ಬಸವರಾಜ, ಮಂಜುನಾಥ, ಪ್ರಮೋದ, ಲಿಂಗಪ್ಪ ಇತರರಿದ್ದರು.