ಜಿಲ್ಲೆ

ಭೋವಿ ನಿಗಮ ಹಗರಣ ತನಿಖೆ ಪ್ರಗತಿಯಲ್ಲಿ

ಬಾಗಲಕೋಟೆ: ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ೧೦೦ ಕೋಟಿ ಹಗರಣದ ತನಿಖೆಯ ಪ್ರಗತಿಯಲ್ಲಿದೆ ಎಂದು ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್. ರವಿಕುಮಾರ್ ಹೇಳಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಗರಣಕ್ಕೆ ಸಂಬಂಧಿಸಿದಂತೆ ಸಿಓಡಿ ತನಿಖೆ ನಡೆಯುತ್ತಿದ್ದು, ಹಳೆಯ ಎಲ್ಲಾ ದಾಖಲಾತಿಗಳು ಸಿಓಡಿ ಸುಪರ್ಧಿಯಲ್ಲಿವೆ. ತನಿಖೆ ನಡೆಸುತ್ತಿದ್ದ ಅಽಕಾರಿಯೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ತನಿಖಾ ತಂಡವನ್ನು ಕಾಂಗ್ರೆಸ್ ಸರ್ಕಾರ ನಂತರ ೧೩ ಅಧಿಕಾರಿಗಳನ್ನು ಒಳಗೊಂಡ ಹೊಸ ತನಿಖಾ ತಂಡವನ್ನು ರಚಿಸಲಾಗಿದೆ ಎಂದರು.

ಭೋವಿ ಅಭಿವೃದ್ಧಿ ನಿಗಮಕ್ಕೆ ೨೦೨೩-೨೪ನೇ ಸಾಲಿಗೆ ರಾಜ್ಯ ಸರ್ಕಾರ ೫೫ ಕೋಟಿ ಅನುದಾನ ನೀಡಿತ್ತು. ೧೦ ಮಹಿಳೆಯನ್ನು ಒಳಗೊಂಡ ಸ್ವಸಹಾಯ ಗುಂಪಿಗೆ ೨.೫ ಲಕ್ಷ ಸಾಲ ಸೌಲಭ್ಯ, ೧ಲಕ್ಷದ ವರೆಗೆ ನೇರ ಸಾಲಸೌಲಭ್ಯ, ಗಂಗಾ ಕಲ್ಯಾಣ ಯೋಜನೆ ಮೂಲಕ ಬೋರವೆಲ್ಲ ಕೊರೆಯಿಸುವ ಯೋಜನೆ, ಭೂ ಒಡೆತನ ಯೋಜನೆ ಹೀಗೆ ಸಾಮಾಜಿಕ ಬದಲಾವಣೆ ಜೊತೆಗೆ ಫಲಾನುಭವಿಗಳನ್ನು ಆರ್ಥಿಕವಾಗಿ ಅಭಿವೃದ್ಧಿಪಡಿಸುವ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ ಎಂದರು.

ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ರಮೇಶ ಚವ್ಹಾಣ ಇದ್ದರು.