filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.2677778, 0.5530417);sceneMode: 2;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 42; 
ಜಿಲ್ಲೆ

ಭೇಟಿಗಾಗಿ ತವಕಿಸಿದ ಗ್ರಾಮದೇವತೆಗಳು

ಚಿತ್ರದುರ್ಗ: ತಾಲೂಕಿನ ಬಚ್ಚಬೋರನಹಟ್ಟಿ ಗ್ರಾಮದಲ್ಲಿ ಶುಕ್ರವಾರ ಗ್ರಾಮದೇವತೆಗಳಾದ ಮಲಿಯಮ್ಮ, ಕಣಿವೆಮಾರಮ್ಮ, ಹೊಸಮ್ಮ ಹಾಗೂ ಕೊಲ್ಲಾಪುರದಮ್ಮ ದೇವತೆಗಳ ಭೇಟಿ ಮಹೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು.

ಮಲಿಯಮ್ಮ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮದೇವತೆಗಳ ಭೇಟಿ ಮಹೋತ್ಸವಕ್ಕೆ ಗ್ರಾಮಸ್ಥರು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದರು.

ದೇವತೆಗಳಿಗೆ ಬೆಳಗ್ಗೆಯಿಂದಲೇ ವಿಶೇಷ ಪೂಜೆ, ಹೂವಿನ ಅಲಂಕಾರ, ಸೇವೆ ಮಹಾಮಂಗಳಾರತಿ ಪೂಜೆ ನೆರವೇರಿತು. ಉತ್ಸವ ಮೂರ್ತಿಗಳ ಭೇಟಿಯಾಗುವ ಕ್ಷಣಕ್ಕಾಗಿ ಕಾದ ಭಕ್ತರು ಹರ್ಷೋದ್ಗಾರ ಮೊಳಗಿಸಿದರು. ಇದೇ ವೇಳೆ ಮಂಗಳ ವಾದ್ಯಘೋಷ ಉತ್ಸಾಹ ಇಮ್ಮಡಿಗೊಳಿಸ