ರಾಯಚೂರು: ರಾಜ್ಯಾದ್ಯಂತ ಅರಣ್ಯ ಹಾಗೂ ಸರ್ಕಾರಿ ಭೂಮಿ ಸಾಗುವಳಿ ಮಾಡುತ್ತಿರುವ ಭೂರಹಿತರಿಗೆ ಪಟ್ಟಾ ನೀಡಬೇಕು. ಅರಣ್ಯ ಇಲಾಖೆಯಿಂದ ಸಾಗುವಳಿದಾರರ ಮೇಲೆ ಹಾಕಲಾಗಿರುವ ಕೇಸ್‌ಗಳನ್ನು ಹಿಂಪಡೆಯಬೇಕು ಎಂದು ಕರ್ನಾಟಕ ರೈತ ಸಂಘ ಒತ್ತಾಯಿಸಿದೆ.
ಸಂಘದ ನಿಯೋಗ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಸೋಮವಾರ ಮನವಿ ಸಲ್ಲಿಸಿ, ಭೂ ಸುಧಾರಣೆ ಹೊಸ ತಿದ್ದುಪಡಿ ಅನಿಯಮ-2020 ಹಾಗೂ ಗೋರಕ್ಷಣಾ ಅನಿಯಮ-2020ನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಭೂರಹಿತ ಗೇಣಿ ಸಾಗುವಳಿ ರೈತರಿಗೆ ಬೆಳೆಸಾಲ, ಸಹಾಯಧನ, ಪರಿಹಾರ ಸೌಲಭ್ಯ ನೀಡುವುದಕ್ಕೆ ಹೊಸ ಕಾಯ್ದೆ ರಚಿಸಬೇಕು. ರಾಜ್ಯಾದ್ಯಂತ ಹೆಚ್ಚುವರಿ ಬೂಮಿ, ಸರ್ಕಾರದ ಪಾಳು ಭೂಮಿಗಳನ್ನು ಗುರುತಿಸಿ ಭೂರಹಿತರಿಗೆ ವಿತರಿಸಬೇಕು.
ಸರ್ಕಾರಿ ಭೂಮಿ ಕಬಳಿಕೆ ಮಾಡಿದವರಿಂದ ಭೂಮಿ ವಶಕ್ಕೆ ಪಡೆದು ಸಮುದಾಯ ಭೂಮಿಗಳನ್ನು ಸಂರಕ್ಷಣೆ ಮಾಡಬೇಕು. ಯಾವ ಉದ್ಧೇಶಕ್ಕಾಗಿ ರೈತರ ಭೂಮಿಯನ್ನು ಸ್ವಾೀನ ಪಡಿಸಿಕೊಳ್ಳಲಾಗಿದೆಯೋ ಅದೇ ಉದ್ದೇಶಕ್ಕೆ ಭೂಮಿ ಉಪಯೋಗಿಸದಿದ್ದಲ್ಲಿ ಅಂತಹ ಭೂಮಿಯನ್ನು ರೈತರಿಗೆ ಭೂಮಿ ಹಿಂದುರಿಸಬೇಕು.
ಪ್ರತಿ ವರ್ಷ ಆಯಾ ಜಿಲ್ಲೆಗಳ ಲ್ಯಾಂಡ್ ಆಡಿಟಿಂಗ್ ತಯಾರಿಸಿ ಸಾರ್ವಜನಿಕ ಪ್ರಕಟಣೆ ನೀಡಬೇಕು. ಅರಣ್ಯ ಮತ್ತು ಸರ್ಕಾರಿ ಭೂಮಿ ಸಾಗುವಳಿದಾರರನ್ನು ಒಕ್ಕಲೆಬ್ಬಿಸಬಾರದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ನಿಯೋಗದಲ್ಲಿ ಸಂಘದ ಜಿಲ್ಲಾಧ್ಯಕ್ಷ ಮಲ್ಲಯ್ಯ ಕಟ್ಟಿಮನಿ, ಟಿಯುಸಿಐ ಜಿಲ್ಲಾಧ್ಯಕ್ಷ ಜಿ.ಅಮರೇಶ, ಕೆಆರ್‌ಎಸ್ ಉಪಾಧ್ಯಕ್ಷ ಸಂತೋಷ ಹಿರೇದಿನ್ನಿ, ಪ್ರಧಾನ ಕಾರ್ಯದರ್ಶಿ ಸೈಯದ್ ಅಬ್ಬಾಸ್ ಅಲಿ, ಪದಾಕಾರಿಗಳಾದ ಅಡಿವೆಪ್ಪ, ಕೆ.ಗಿರಿಲಿಂಗಸ್ವಾಮಿ, ಶಫೀಕ್ ಪಾಷಾ, ತಿಪ್ಪಣ್ಣ ಚಿಕ್ಕಹೆಸರೂರು, ಶೇಖರಪ್ಪ ಇದ್ದರು.