ತುಮಕೂರು: ವೈಜ್ಞಾನಿಕ ಸಂಶೋಧನೆಯ ಹೆಸರಿನಲ್ಲಿ ಪರಿಸರ ನಾಶಮಾಡದೆ ಮನುಕುಲದ ಪ್ರಜ್ಞೆಯ ಸಂಕೇತವಾಗಿ ಪರಿಸರ ಕಾಪಾಡಬೇಕು ಎಂದು ಭೂಗರ್ಭಶಾಸ್ತçಜ್ಞ ಡಾ.ನಾಗೇಶ ಹೆಗಡೆ ಹೇಳಿದರು.
ತುಮಕೂರು ವಿವಿ ವಿಜ್ಞಾನ ಕಾಲೇಜು ಕನ್ನಡ ವಿಭಾಗ ಬುಧವಾರ ಆಯೋಜಿಸಿದ್ದ `ಇರುವುದೊಂದೆ ಭೂಮಿ-ಭವಿಷ್ಯದ ಹಿತಕ್ಕಾಗಿ ವಿಜ್ಞಾನ' ವಿಷಯ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಬಂಡವಾಳಶಾಹಿ ಅರ್ಥವ್ಯವಸ್ಥೆಯೇ ಬಿಸಿ ಪ್ರಳಯಕ್ಕೆ ಕಾರಣವಾಗಿದೆ, ಜಾಗತಿಕ ತಾಪಮಾನದ ಏರಿಳಿತವನ್ನು ಹವಾಮಾನ ತಗ್ಗಿಸುವಿಕೆಯ ಮುಖಾಂತರ ತಡೆಯಹುದು. ಭೂಮಿಯ ಒಡಲು ಶಾಂತಿ ಬಯಸುತ್ತದೆಯೇ ಹೊರತು ವಿನಾಶವನ್ನಲ್ಲ ಎಂದರು.
ಕುಲಪತಿ ಪ್ರೊ.ಎಂ.ವೆAಕಟೇಶ್ವರಲು ಮಾತನಾಡಿ, ತಂತ್ರಜ್ಞಾನ ಆಧುನಿಕಗೊಂಡ ಮೇಲೆ ಪರಿಸರದಿಂದ ನಾವೆಲ್ಲರೂ ದೂರ ಉಳಿದಿz್ದೆÃವೆ. ಪರಿಸರ ಚಿಂತಕರ ಉತ್ತಮ ಚಿಂತನೆಗಳನ್ನು ಅಳವಡಿಸಿಕೊಂಡು, ಪರಿಸರ ಸಂರಕ್ಷಣೆಗಾಗಿ ಆ ಉತ್ತಮ ಚಿಂತನೆಗಳಿAದ ಉತ್ಕೃಷ್ಟ ಜ್ಞಾನ ಪಡೆದಾಗ ಅಭಿವೃದ್ಧಿ ಸಾಧ್ಯ ಎಂದರು.
ಪರಿಸರ ತಜ್ಞ ಡಾ.ಕೇಶವ ಎಚ್.ಕೊರ್ಸೆ, ತುಮಕೂರು ವಿಜ್ಞಾನ ಕೇಂದ್ರದ ಉಪಾಧ್ಯಕ್ಷ ಸಿ.ಯತಿರಾಜು, ಪ್ರಾಚಾರ್ಯ ಡಾ.ಪ್ರಕಾಶ್ ಎಂ.ಶೇಟ್ ಮಾತನಾಡಿದರು.
ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಗೀತಾ ವಸಂತ, ಅತಿಥಿ ಉಪನ್ಯಾಸಕಿ ಆಶಾರಾಣಿ ಇದ್ದರು.