ವಿಜಯಪುರ: ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಮಸೂತಿ ಗ್ರಾಮದಲ್ಲಿ ಭೂಮಿ ಕಂಪಿಸಿದ ಅನುಭವ ಆಗಿದೆ. ತಡರಾತ್ರಿ ಭಾರೀ ಪ್ರಮಾಣದ ಸ್ಪೋಟದ ಸದ್ದಿನ ಜೊತೆಗೆ ಕಂಪಿಸಿದ ಅನುಭವ ಆಗಿದೆ. ಮಸೂತಿ ಗ್ರಾಮಸ್ಥರಲ್ಲಿ ಆತಂಕ ಮೂಡಿದ್ದು, ಈ ಹಿಂದೆಯೂ ಸ್ಪೋಟದ ಜೊತೆಗೆ ಭೂಮಿ ಕಂಪಿಸಿದ ಅನಿಭವವಾಗಿತ್ತು. ಕಳೆದ ಒಂದು ವಾರದ ಹಿಂದೆ ಮಸೂತಿ ಪಕ್ಕದ ಮಲಘಾಣ, ಕೂಡಗಿ, ಮನಗೂಳಿ ಗ್ರಾಮಗಳಲ್ಲಿಯೂ ಕೂಡ ಇದೆ ರೀತಿಯಲ್ಲಿ ಸ್ಪೋಟ ಮತ್ತು ಭೂ ಕಂಪಿಸಿದ ಅನುಭವ ಉಂಟಾಗಿತ್ತು. ಹೀಗಾಗಿ ಈ ಭಾಗದ ಗ್ರಾಮಗಳ ಜನ್ರು ಭಯದಲ್ಲಿದ್ದಾರೆ. ಭೂಮಿ ಕಂಪಿಸಿದ ಸ್ಥಳಕ್ಕೆ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಭೇಟಿನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.