ಜಿಲ್ಲೆ

ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಬೇಡ

ಬೀದರ್: ರಾಜ್ಯ ಸರ್ಕಾರ ಜಾರಿಗೆ ತರುತ್ತಿರುವ ಭೂ ಸುಧಾರಣಾ ಕಾಯ್ದೆ ವಿರೋಧಿಸಿ ವಿವಿಧ ದಲಿತಪರ ಸಂಘಟನೆಗಳಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು. ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರ್ಯಾಲಿ ನಡೆಸಿದ ಪ್ರಮುಖರು, ಬಿಜೆಪಿ ಸರ್ಕಾರ ಕೃಷಿಕರಲ್ಲದ ಬಂಡವಾಳಶಾಹಿ, ಅಧಿಕಾರಶಾಹಿ, ಬಹುರಾಷ್ಟ್ರೀಯ ಕಂಪನಿಗಳಿಗೆ ಭೂಮಿ ನೀಡುವ ಹುನ್ನಾರದಿಂದ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಉಳುವವನೇ ಭೂಮಿ ಒಡೆಯ ಎಂದು ಘೋಷಿಸಿದ್ದರು. ತದನಂತರ ಡಿ.ದೇವರಾಜ ಅರಸು ಅವಧಿಯಲ್ಲೂ ಉಳುವವನೇ ಒಡೆಯ ಎಂದು ಮರು ಘೋಷಣೆ ಮಾಡಿ ಕಾಯ್ದೆ ಜಾರಿಗೆ ತಂದರು. ಆದರೆ ಈಗಿನ ಸರ್ಕಾರ ಕಾಯ್ದೆಗೆ ತಿದ್ದುಪಡಿ ತಂದು ಬಹುರಾಷ್ಟ್ರೀಯ ಕಂಪನಿಗಳಿಗೆ ಮಣೆ ಹಾಕಲು ಹೊರಟಿರುವುದು ಸರಿಯಲ್ಲ ಎಂದು ಕಿಡಿಕಾರಿದರು.
ಕೃಷಿ ಕೂಲಿ ಕಾರ್ಮಿಕರಿಗೆ ಭೂಮಿ ನೀಡದಿರುವ ಇಂದಿನ ದಿನಗಳಲ್ಲಿ ಭೂ ಸುಧಾರಣಾ ಅಧಿನಿಯಮ 1961 ಮತ್ತು ನಿಯಮ 1974 ತಿದ್ದುಪಡಿ ಮಾಡುವ ಸಕರ್ಾರದ ಕ್ರಮ ಕೂಡಲೇ ಹಿಂಪಡೆಯಬೇಕು ಎಂದು ಜಿಲ್ಲಾಡಳಿತದ ಮೂಲಕ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.
ಸಂಘಟನೆಗಳ ಪ್ರಮುಖರಾದ ರಾಜಕುಮಾರ ಮೂಲಭಾರತಿ, ಬಾಬುರಾವ ಪಾಸ್ವಾನ್, ಕಲ್ಯಾಣರಾವ ಭೋಸ್ಲೆ, ನಾಗೇಂದ್ರ ದಂಡೆ, ಶ್ರೀಪತರಾವ ದೀನೆ, ಅರುಣ ಕುದರೆ, ರವಿಕುಮಾರ ವಾಘ್ಮಾರೆರೆ, ಓಂಪ್ರಕಾಶ ಭಾವಿಕಟ್ಟಿ, ಶಿವಕುಮಾರ ನೀಲಿಕಟ್ಟಿ, ಅಂಬಾದಾಸ ಗಾಯಕವಾಡ, ಅರುಣ ಪಟೇಲ್, ಶಾಲಿವಾನ ಬಡಿಗೇರ, ಬಾಬುರಾವ ಕೌಠಾ, ಬಾಬುರಾವ ಮಿಠಾರೆ, ಮಲ್ಲಿಕಾಜರ್ುನ ಚಿಟ್ಟಾ, ಅಭಿ ಕಾಳೆ, ರಾಜಕುಮಾರ ಶೇರಿಕಾರ, ಜೀವನ ಬುಡ್ತಾ, ಪ್ರಶಾಂತ ಭಾವಿಕಟ್ಟಿ, ಲಕ್ಷ್ಮೀ ಕಾಂಬ್ಳೆ, ರಾಹುಲ್ ಡಾಂಗೆ ಇತರರಿದ್ದರು.