ಜಿಲ್ಲೆ

ಭೀಮಾಶಂಕರ ಬಿದನೂರ ಅವರಿಗೆ ಶಿಷ್ಯರಿಂದ 'ಗುರು ಅಭಿನಂದನೆ'

ಆರ್.ಕೃಷ್ಣ

ಮೈಸೂರು: ನಗರದ ಶ್ರೀಗುರು ಪುಟ್ಟರಾಜ ಸಂಗೀತ ಸಭಾ ಶಾಲೆಯ ಸ್ಥಾಪಕ, ತಬಲಾ ವಾದಕ ಭೀಮಾಶಂಕರ ಬಿದನೂರ ಅವರಿಗೆ ಆ. 26ರಂದು ಅವರ ಶಿಷ್ಯರಿಂದ ಗುರು ಅಭಿವಂದನೆ ಕಾರ್ಯಕ್ರಮ ಆಯೋಜಿಸಲಾಗಿದೆ.
ರಾಮಕೃಷ್ಣನಗರದ ರಮಾಗೋವಿಂದ ಸಭಾಂಗಣದಲ್ಲಿ ಆ.26ರಂದು ಸಂಜೆ 5.30ಕ್ಕೆ ಕಾರ್ಯಕ್ರಮ ಆಯೋಜಿಸಿದ್ದು, ಶ್ರೀ ಗುರು ಪುಟ್ಟರಾಜ ಸಂಗೀತ ಸಭಾ ವಿದ್ಯಾರ್ಥಿಗಳಿಂದ ತಬಲಾ ವಾದನ, ಪಂ.ರವಿಶಂಕರ್ ಮಿಶ್ರಾ ಅವರಿಂದ ಕೊಳಲು ವಾದನ, ಭೀಮಾಶಂಕರ ಬಿದನೂರ ಹಾಗೂ ಕು.ರೋಹಿತ್ ಕಳಲೆ ಅವರಿಂದ ತಬಲಾ ಜುಗಲ್ಬಂದಿ ಕಛೇರಿ ನಡೆಯಲಿದೆ.
ಬಳಿಕ ಪಂ.ವೀರಭದ್ರಯ್ಯ ಹಿರೇಮಠ ಅವರಿಂದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ಮೃತ್ಯುಂಜಯ ಹಿರೇಮಠ ಹಾಗೂ ವಿಘ್ನೇಶ್ ಭಾಗ್ವತ್ ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ ಎಂದು ಕಾರ್ಯಕ್ರಮ ಆಯೋಜಕ ರೋಹಿತ್ ತಿಳಿಸಿದ್ದಾರೆ.