ಜಿಲ್ಲೆ

ಭೀಮಾ ನದಿಯಲ್ಲಿ ಮುಳುಗಿ ಬಾಲಕ ಸಾವು

ವಿಜಯಪುರ:ದೀಪಾವಳಿ ಸಂಭ್ರಮದಲ್ಲಿದ್ದ ವೇಳೆ ಆಕಸ್ಮಿಕವಾಗಿ ಭೀಮಾ ನದಿಯಲ್ಲಿ ಮುಳುಗಿ ಕುರಿಗಾಯಿ ಬಾಲಕನೋರ್ವ ಮೃತಪಟ್ಟ ಘಟನೆ ಇಂಡಿ ತಾಲೂಕಿನ ಅಗರಖೇಡ ಗ್ರಾಮದ ಬಳಿಯ ಭೀಮಾ‌ ನದಿಯಲ್ಲಿ ನಡೆದಿದೆ. ಅಗರಖೇಡ ನಿವಾಸಿ 12 ವರ್ಷದ ಬಾಲಕ ಶಿವಪ್ಪ ಕರೆಪ್ಪ ನಿಂಬಾಳ(ಪೂಜಾರಿ) ಮೃತಪಟ್ಟ ಬಾಲಕನಾಗಿದ್ದಾನೆ. ದೀಪಾವಳಿ ಹಬ್ಬದ ಪ್ರಯುಕ್ತ ಕುರಿಗಳಿಗೆ ಸ್ನಾನ ಮಾಡಿಸಲು ತಂದೆ ಹಾಗೂ ಸಹೋದರನೊಂದಿಗೆ ನದಿಗೆ ತೆರಳಿದ್ದ ವೇಳೆ ಅವಘಡ ಸಂಭವಿಸಿದೆ.‌ ಸ್ನಾನ ಮಾಡಿಸುವಾಗ ಕುರಿಗಳಿಂದ ತುಳಿತಕ್ಕೊಳಗಾಗಿ ನದಿಯಲ್ಲಿ ಮುಳುಗಿದ್ದ ಬಾಲಕನ ಶವವನ್ನು ಮೀನುಗಾರರು ಹಾಗೂ ಸ್ಥಳೀಯರು ಸೇರಿ ಹೊರತೆಗೆದಿದ್ದಾರೆ. ಇಂಡಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿ ಘಟನೆ ಜರುಗಿದೆ.