ಜಿಲ್ಲೆ

ಭೀಮನ ಅಮಾವಾಸ್ಯೆ ಅಂಗವಾಗಿ ಚಿಕ್ಕದೇವಮ್ಮನಿಗೆ ವಿಶೇಷ ಪೂಜೆ

ಬಾಲಮುರಳಿಕೃಷ್ಣ

ಸರಗೂರು: ಭೀಮನ ಅಮಾವಾಸ್ಯೆ ಹಿನ್ನೆಲೆಯಲ್ಲಿ ಗುರುವಾರ ತಾಲೂಕಿನ ನಾನಾ ದೇವಾಲಯಗಳಿಗೆ ಭಕ್ತರು ದಾಂಗುಡಿ ಇಟ್ಟಿದ್ದರು. ಅದರಲ್ಲೂ ಶಿವನ ದೇವಾಲಯಗಳಿಗಂತೂ ಸಹಸ್ರಾರು ಮಂದಿ ಭಕ್ತರು ಆಗಮಿಸಿದ್ದರು.

ತಾಲೂಕಿನ ಚಿಕ್ಕದೇವಮ್ಮನ ಬೆಟ್ಟದ ತಾಯಿಗೆ ಹಾಗೂ ಶ್ರೀ ಕ್ಷೇತ್ರ ಬೇಲದಕುಪ್ಪೆ ಮಹದೇಶ್ವರ ದೇವಸ್ಥಾನಗಳಲ್ಲಿ ಭೀಮನ ಅಮಾವಾಸ್ಯೆ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು. ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.

ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳು ರಘು, ರಾಕೇಶ್, ಬೆಟ್ಟದ ಪಾರುಪತ್ತೇದಾರ ಶಾಂತಿಪುರ ಮಹದೇವಸ್ವಾಮಿ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಹೂವಿನಕೊಳ ಸಿದ್ದರಾಜು, ಅರ್ಚಕರಾದ ಪ್ರಸನ್ನ ಕುಮಾರ್, ದೇವಣ್ಣ, ಸಂತೋಷ್, ಮನೋಹರ್, ಚಿಕ್ಕದೇವಣ್ಣ, ಸಿದ್ದಲಿಂಗಸ್ವಾಮಿ, ಶಿವಕುಮಾರ್, ನಿಂಗರಾಜು, ನಿಂಗಣ್ಣ ಲಿಂಗಪ್ಪ, ಮಣಿ, ಮನು, ನಿಂಗರಾಜು, ನಿಂಗಣ್ಣ, ಕೃಷ್ಣ ಹಾಜರಿದ್ದರು.