ಅಪಘಾತ ನಡೆದ ಬಾಗಲಕೋಟೆ ನವನಗರದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಬಳಿ ಭೇಟಿ ನೀಡಿದ ಐಜಿಪಿ ವಿಕಾಸಕುಮಾರ ಅವರಿಗೆ ಬಾಗಲಕೋಟೆ ಎಸ್ಪಿ ಅಮರನಾಥ ರೆಡ್ಡಿ ಅವರು ಅಪಘಾತದ ಬಗ್ಗೆ ಮಾಹಿತಿ ನೀಡುತ್ತಿರುವುದು. 
ಜಿಲ್ಲೆ

ಭೀಕರ ಅಪಘಾತ ಮೂವರ ಸಾವು…!

ಸಂತೋಷ ದೇಶಪಾಂಡೆ

ಬಾಗಲಕೋಟೆ: ಸ್ಕೂಟಿ ಬೈಕ್‌ಗೆ ಮಿತಿಮೀರಿ ವೇಗದಲ್ಲಿ ಬಂದ ಯಮಹಾ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಮಹಿಳಾ ಪ್ರೊಪೇಸರ್ ಹಾಗೂ ಸಾಪ್ಟವೇರ್ ಇಂಜಿನಿಯರ್ ಸೇರಿ ಒಟ್ಟು ಮೂವರು ಬಲಿಯಾಗಿರುವ ದುರ್ಘಟನೆ ಗುರುವಾರ ತಡರಾತ್ರಿ ಬಾಗಲಕೋಟೆ ನವನಗರದಲ್ಲಿ ಸಂಭವಿಸಿದೆ.


ಇಬ್ಬರು ಯುವತಿಯರು ಸ್ಕೂಟಿಯಲ್ಲಿ ಬರುತ್ತಿದ್ದ ವೇಳೆ ಮತ್ತಿಬ್ಬರು ದ್ದ ಬೈಕ್ ಅತಿಯಾದ ವೇಗದಲ್ಲಿ ಬಂದು ಡಿಕ್ಕಿ ಹೊಡೆದಿದ್ದರಿಂದ ಮೂವರು ಸಾವನ್ನಪ್ಪಿದ್ದಾರೆ. ಸ್ಕೂಟಿಯಲ್ಲಿದ್ದ ಶ್ರುತಿ ಒಂದಕುದರಿ (೩೨), ರಜನಿ ಒಂದಕುದರಿ (೩೪) ಹಾಗೂ ಬೈಕ್ ನಲ್ಲಿ ಹಿಂದೆ ಕುಳಿತಿದ್ದ ಅಭಿಷೇಕ ದೋತ್ರಿ(೨೦) ಮೃತಪಟ್ಟಿರುವ ದುರ್ದೈವಿಗಳು.

ಮೃತ ಶ್ರುತಿ ಅವರು ಬಾಗಲಕೋಟೆಯ ಡೆಂಟಲ್ ಕಾಲೇಜಿನಲ್ಲಿ ಪ್ರೊಪೇಸರ್ ಆಗಿದ್ದು, ರಜನಿ ಸಾಪ್ಟವೇರ್ ಇಂಜಿನಿಯರ್ ಇದ್ದು ಬೆಂಗಳೂರ ರಾರಾಜಿನಗರದ ನಿವಾಸಿ ಆಗಿದ್ದಾರೆ. ಹಾಗೆಯೇ ಸ್ಕೂಟಿಗೆ ಡಿಕ್ಕಿ ಹೊಡೆದ ಬೈಕ್ ಹಿಂಬದಿಯಲ್ಲಿ ಕುಳಿತಿದ್ದ ಅಭಿಷೇಕ ಕೂಲಿ ಕೆಲಸ ಮಾಡಿಕೊಂಡಿದ್ದ. ಬೈಕ್ ಸವಾರಿ ಮಾಡುತ್ತಿದ್ದ ಸಂದೀಪ(೨೨) ತೀವಗೊಂಡಿದ್ದು ಚಿಕಿತ್ಸೆಗೆ ದಾಖಲಾಗಿದ್ದಾನೆ.

ಘಟನೆ ವಿವರ:
ಗುರುವಾರ ರಾತ್ರಿ ಸಂಬಂಽಕರಾದ ಶ್ರುತಿ ಹಾಗೂ ರಜನಿ ಅವರು ಹೋಟೆಲ್ ಹೋಗಿ ವಾಪಸ್ಸು ಕಾಳಿದಾಸ ಕ್ರಾಸ್ ನಿಂದ ತಮ್ಮ ಮನೆಗೆ ಬರುತ್ತಿದ್ದರು. ನವನಗರದ ಪರಿಸರ ಮಾಲಿನ್ಯ ನಿಯಂತ್ರಣ ಕಚೇರಿ ಬಳಿ ಇರುವ ಡಿವೈಡರ್ ಹತ್ತಿರ ಅವರ ಮನೆ ಇದ್ದಿದ್ದರಿಂದ ಇಂಡಿಕೇಟರ್ ಹಾಕಿ ನಿಧಾನವಾಗಿ ವಾಹನ ತಿರುಗಿಸಿದ್ದರು. ಇದೇ ವೇಳೆ ಆಗ್ನಿಶಾಮಕದಳ ಕಚೇರಿ ಮಾರ್ಗವಾಗಿ ಕಾಳಿದಾಸ ಸರ್ಕಲ್ ಕಡೆಗೆ ಅತ್ಯಂತ ವೇಗವಾಗಿ(೧೦೦ ಕಿ.ಮೀ.) ಬೈಕ್ ಓಡಿಸಿಕೊಂಡು ಬಂದ ಸಂದೀಪ ಅತ್ಯಂತ ರಬಸವಾಗಿ ಡಿಕ್ಕಿ ಹೊಡೆದಿದ್ದರಿಂದ ಸ್ಕೂಟಿ ಪುಡಿಪುಡಿಯಾಗಿ ಇಬ್ಬರು ಯುವತಿಯರು ಹತ್ತಿಪ್ಪತ್ತು ಮೀಟರ್ ದೂರದಲ್ಲಿ ಬಿದ್ದರು. ಇನ್ನು ಬೈಕ್‌ನ ಹಿಂಬದಿಯಲ್ಲಿ ಕುತಿಳಿದ್ದ ಅಭಿಷೇಕ ೩೦ ಮೀಟರ್ ನಷ್ಟು ದೂರಕ್ಕೆ ಹಾರಿ ಬಿದ್ದಿದ್ದಾನೆ. ಈ ವೇಳೆ ಹಿಂದೆ ಬರುತ್ತಿದ್ದ ಬೈಕ್ ಸವಾರರು ತೀವ್ರವಾಗಿ ನರಳುತ್ತ ಬಿದ್ದಿದ್ದ ನಾಲ್ವರನ್ನು ಕುಮಾರೇಶ್ವರ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇವರಲ್ಲಿ ಓರ್ವ ಸ್ಥಳದಲ್ಲಿ ಸಾವನ್ನಪ್ಪಿದ್ದು, ಇನ್ನಿಬ್ಬರು ಮಾರ್ಗಮಧ್ಯ ಪ್ರಾಣ ಬಿಟ್ಟಿದ್ದಾರೆ.

ಇನ್ನು ಅಪಘಾತದಲ್ಲಿ ಸಾವನ್ನಪ್ಪಿರುವ ಶ್ರುತಿ ಹಾಗೂ ರಜನಿ ಅವರು ಪಾಲಕ, ಪೋಷಕರು ಸದ್ಯ ವಿದೇಶದಲ್ಲಿ ಇದ್ದು, ಅವರು ಬಂದ ಬಳಿಕವೇ ಮೃತರಿಬ್ಬರ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಹೀಗಾಗಿ ಮೃತದೇಹಗಳನ್ನು ಕುಮಾರೇಶ್ವರ ಆಸ್ಪತ್ರೆಯ ಡಿಪ್ರಿಜರ್ ನಲ್ಲಿ ಇಡಲಾಗಿದೆ. ಯುವಕ ಅಭಿಷೇಕ ವರ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಅಮರನಾಥ ರೆಡ್ಡಿ ಅವರು ತಿಳಿಸಿದ್ದಾರೆ. ಸುಡಾನ್ ನಲ್ಲಿ ಇರುವ ಶ್ರುತಿ ಹಾಗೂ ರಜನಿ ಅವರ ಪಾಲಕರು ಬಂದ ಬಳಿಕ ಮಹಿಳೆಯರಿಬ್ಬರ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದಿದ್ದಾರೆ.

ಇನ್ನು ಅಪಘಾತವಾಗಿರವ ಸ್ಥಳದ ಪಕ್ಕದಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿ ಇದ್ದು, ಅಲ್ಲಿನ ಸಿಸಿ ಟಿವಿಯಲ್ಲಿ ಅಪಘಾತದ ದೃಶ್ಯ ಸಂಪೂರ್ಣ ಸೆರೆಯಾಗಿದೆ. ಡೆವೆಡರ್ ಬಳಿ ಯುವತಿ ಬೈಕ್ ನಲ್ಲಿ ಅತ್ಯಂತ ನಿಧಾನಕ್ಕೆ ತಿರುತಿಸಿದ್ದಾರೆ. ಈ ವೇಳೆ ರಸ್ತೆ ನಿಯಮದಂತೆ ಇಂಡಿಕೇಟರ್ ಸಹ ಬಳಿಕ ಮಾಡಿದ್ದಾರೆ. ಆದರೆ, ಎದುರಿಗೆ ಬಂದ ಸಂದೀಪ ನಗರದಲ್ಲಿ ಬೈಕ್ ಸಂಚಾರದ ವೇತಿ ಮಿತಿಯನ್ನು ಲೆಕ್ಕಿಸದೇ ಅಂದಾಜು ೧೦೦ ಕಿ.ಮೀ. ವೇಗದಲ್ಲಿ ಬಂದು ಸ್ಕೂಟಿಗೆ ಡಿಕ್ಕಿ ಹೊಡೆದಿದ್ದಾರೆ. ಈ ಎಲ್ಲ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಬೈಕ್ ಸವಾರ ಅತ್ಯಂತ ನಿರ್ಲಕ್ಷ್ಯತನದಿಂದ ಬೈಕ್ ಚಲಾಯಿಸಿದ್ದೆ ಈ ಅಪಘಾತಕ್ಕೆ ಕಾರಣವಾಗಿದೆ. ಜೊತೆಗೆ ಯಾರೂ ಸಹ ಹೆಲ್ಮೆಟ್ ಹಾಕಿರಲಿಲ್ಲ. ಆಕಸ್ಮಾತ್ ಹೆಲ್ಮೆಟ್ ಹಾಕಿದ್ದರೆ ಜೀವ ಉಳಿಯುತ್ತಿತ್ತೇನೋ? ಹೆಲ್ಮಟ್ ಹಾಗೂ ಸಂಚಾರಿ ನಿಯಮದ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದರೂ ಅನೇಕರು ಹೆಲ್ಮೆಟ್ ಹಾಕಿಕೊಳ್ಳದೇ ಬೈಕ್ ಸವಾರಿ ಮಾಡುತ್ತಾರೆ. ಇದರಿಂದ ಅಪಘಾತದಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅಪಘಾತದಲ್ಲಿ ಸಾವಿನ ಸಂಖ್ಯೆ ತಗ್ಗಲು ಹೆಲೆಟ್ ಹಾಕಿ ಬೈಕ್ ಚಲಾಯಿಸಿ ಎಂದು ಎಸ್ಪಿ ಅಮರನಾಥ ರೆಡ್ಡಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಅಪಘಾತದಲ್ಲಿ ಸಾಪ್ಟವೇರ್ ಇಂಜಿಯರ್, ಡೆಂಟಲ್ ಕಾಲೇಜ್ ಪ್ರೊಪೇಸರ್ ಹಾಗೂ ಓರ್ವ ಕೂಲಿ ಸಾವನ್ನಪ್ಪಿದ್ದು, ಇಡೀ ನಗರವನ್ನೆ ಬೆಚ್ಚಿಬೀಳಿಸಿದೆ. ನ್ನು ಅಪಘಾತ ನಡೆದ ಸ್ಥಳಕ್ಕೆ ಬೆಳಗಾವಿ ಐಜಿಪಿ ವಿಕಾಸಕುಮಾರ ಅವರು ಭೇಟಿ ನೀಡಿ ಪರಿಶೀಲಿಸಿದರು. ಐಜಿಪಿ ಅವರಿಗೆ ಎಸ್ಪಿ ಅಮರನಾಥ ರೆಡ್ಡಿ ಅವರು ಸಂಪೂರ್ಣ ಮಾಹಿತಿ ಒದಗಿಸಿದರು. ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಐಜಿಪಿ ವಿಕಾಸಕುಮಾರ, ಅಪಘಾತದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅತಿಯಾದ ವೇಗ, ಸುರಕ್ಷಿತ ಕ್ರಮ ಇಲ್ಲದೇ ಬೈಕ್ ಸವಾರಿ ಮಾಡಿರುವುದು ಸೇರಿದಂತೆ ವಿವಿಧ ಕಾರಣಗಳು ಇರುತ್ತವೆ. ಪ್ರಕರಣದ ತನಿಖೆ ನಡೆಯುತ್ತಿದೆ ಎಂದರು.