ಜಿಲ್ಲೆ

ಭಿನ್ನಾಭಿಪ್ರಾಯ ಬಿಟ್ಟು ಸದಸ್ಯತ್ವ ಮಾಡಿಸಿ

ಕಲಬುರಗಿ: ಬಿಜೆಪಿ ಬಲವರ್ಧನೆಗೆಗೆ ಎಲ್ಲ ಭಿನ್ನಾಭಿಪ್ರಾಯ ಬದಿಗೊತ್ತಿ, ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸೂಚಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ನಗರ ಹಾಗೂ ಗ್ರಾಮಾಂತರ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಸಂಘಟನೆ ಕುಸಿದಿದ್ದು, ಸಂಘಟನೆ ಅವಶ್ಯವಾಗಿದೆ. ಒಂದಾಗಿ ಸದೃಢ ರಾಷ್ಟç ನಿರ್ಮಾಣಕ್ಕೆ ಬಿಜೆಪಿ ಸದಸ್ಯತ್ವ ಅಭಿಯಾನ ನಡೆಸಬೇಕು. ವೈಮನಸ್ಸು ಬಿಟ್ಟು ಪಕ್ಷಕ್ಕಾಗಿ ದುಡಿಯಿರಿ ಎಂದರು.
ಬಿಜೆಪಿ ಜಿಲ್ಲಾ ಘಟಕದಲ್ಲಿ ಹಲವು ಬದಲಾವಣೆ ಆಗಿದೆ. ಎಲ್ಲ ಸರಿಯಿಲ್ಲ ಎನ್ನುವುದು ಗಮನಕ್ಕೆ ಬಂದಿದೆ. ಎರಡು ತಿಂಗಳಲ್ಲಿ ಜಿಲ್ಲೆಗೆ ಬರುತ್ತೇನೆ. ಬಿಜೆಪಿ ನಾಯಕರು ಹೆಚ್ಚಿನ ಸದಸ್ಯತ್ವ ಮಾಡಿಸಲು ಆದ್ಯತೆ ನೀಡಬೇಕು. ಪಕ್ಷದ ಜೀವಾಳವಾದ ಕಾರ್ಯಕರ್ತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಂಘಟಿಸಿ ಎಂದರು.
ದೇಶಾದ್ಯAತ ಸದಸ್ಯತ್ವ ಅಭಿಯಾನ ನಡೆದಿದ್ದು, ದಾಖಲೆಯ ಪ್ರಮಾಣದಲ್ಲಿ ಮರು ನೋಂದಣಿ, ನೂತನ ನೋಂದಣಿ ಮಾಡಿಸಬೇಕು ಎನ್ನುವ ಸಂಕಲ್ಪ ಸಭೆಯಲ್ಲಿ ಮಾಡಲಾಯಿತು.
ರಾಜ್ಯ ಉಪಾಧ್ಯP್ಷÀ ರಾಜುಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರz್ದÉÃವಾಡಗಿ, ನಗರಾಧ್ಯಕ್ಷ ಚಂದು ಪಾಟೀಲ್, ಮಾಜಿ ಸಚಿವ ಬಾಬುರಾ ಚವ್ಹಾಣ್, ಶಾಸಕ ಬಸವರಾಜ ಮತ್ತಿಮಡು, ಡಾ.ಅವಿನಾಶ ಜಾಧವ್, ವಿಧಾನ ಪರಿಷತ್ ಸದಸ್ಯ ಡಾ.ಬಿ.ಜಿ ಪಾಟೀಲï, ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ, ಸುಭಾಷ ಗುತ್ತೇದಾರ, ದತ್ತಾತ್ರೇಯ ಪಾಟೀಲï ರೇವೂರ, ಅಮರನಾಥ ಪಾಟೀಲ್, ನಿತೀನ್ ಗುತ್ತೇದಾರ ಇತರರಿದ್ದರು.