ಬೆಂಗಳೂರಿನ ನಿವಾಸದಲ್ಲಿ ಕೇಂದ್ರ ಸಚಿವ ಎಚ್. ಡಿ.ಕುಮಾರಸ್ವಾಮಿ ಅವರನ್ನು ಬಮುಲ್ ನೆಲಮಂಗಲ ಕ್ಷೇತ್ರದ ನಿರ್ದೇಶಕ ಭವಾನಿಶಂಕರ್‌ಬೈರೇಗೌಡ ಭೇಟಿ ಮಾಡಿ ಅಭಿನಂದಿಸಿದರು. ಮಾಜಿ ಶಾಸಕರಾದ ಡಾ.ಕೆ.ಶ್ರೀನಿವಾಸಮೂರ್ತಿ, ಎಂ.ವಿ.ನಾಗರಾಜು, ಉದ್ಯಮಿ ಎಚ್.ಬಿ.ಮಂಜುನಾಥ್, ಜೆಡಿಎಸ್ ತಾಲೂಕು ಅಧ್ಯಕ್ಷ ಟಿ.ತಿಮ್ಮರಾಯಪ್ಪ, ಕಸಬಾ ಅಧ್ಯಕ್ಷ ರಮೇಶ್, ಬಿಜೆಪಿ ಅಧ್ಯಕ್ಷ ಜಗದೀಶ್‌ಚೌಧರಿ ಇದ್ದರು. 
ಜಿಲ್ಲೆ

ಭಿನ್ನಾಭಿಪ್ರಾಯ ತೊರೆದರೆ ಮೈತ್ರಿಗೆ ಗೆಲುವು

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅನಿಸಿಕೆ- ಬಮುಲ್ ನೂತನ ನಿರ್ದೇಶಕನಿಗೆ ಸನ್ಮಾನ

ನೆಲಮಂಗಲ: ನೆಲಮಂಗಲ ಕ್ಷೇತ್ರದಲ್ಲಿ ಎನ್‌ಡಿಎ ಮೈತ್ರಿ ಪಕ್ಷ ಸಾಕಷ್ಟು ಬಲವಾಗಿದೆ. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಆಂತರಿಕ ಭಿನ್ನಾಭಿಪ್ರಾಯ ತೊರೆದು ಕೆಲಸ ಮಾಡಿದರೆ ಮುಂಬರುವ ಎಲ್ಲ ಚುನಾವಣೆಯಲ್ಲೂ ಎನ್‌ಡಿಎ ಬೆಂಬಲಿತ ಅಭ್ಯರ್ಥಿಗಳ ಗೆಲುವು ಖಚಿತ ಎಂದು ಎಚ್. ಡಿ.ಕುಮಾರಸ್ವಾಮಿ ಹೇಳಿದರು.

ಇತ್ತೀಚೆಗಷ್ಟೆ ಬಮುಲ್ ನಿರ್ದೇಶಕರಾಗಿ ಆಯ್ಕೆಯಾದ ಭವಾನಿ ಶಂಕರ್ ಬೈರೇಗೌಡ ಹಾಗೂ ಮತ್ತವರ ಬೆಂಬಲಿಗರು ಎಚ್‌ಡಿಕೆ ಅವರ ಬೆಂಗಳೂರಿನ ನಿವಾಸದಲ್ಲಿ ಭಾನುವಾರ ಬೆಳಗ್ಗೆ ಭೇಟಿ ಮಾಡಿ ಮಾತುಕತೆ ನಡೆಸಿದ ವೇಳೆ ಮಾತನಾಡಿದರು. ಈ ನಿಟ್ಟಿನಲ್ಲಿ ಎರಡು ಪಕ್ಷದ ಮುಖಂಡರು ಹೆಚ್ಚು ಪಕ್ಷ ಸಂಘಟನೆಗೆ ಒತ್ತು ನೀಡಬೇಕೆಂದು ಸಲಹೆ ನೀಡಿದರು.

ರೈತರ ಬಗ್ಗೆ ಕಾಳಜಿ ಜತೆಗೆ ರೈತರ ಸಮಸ್ಯೆಗಳ ಬಗ್ಗೆ ಅರಿವಿರಬೇಕು. ಅಂತಹ ನಿಜವಾದ ರೈತನನ್ನು ಹಾಲು ಉತ್ಪಾದಕರು ನಿರ್ದೇಶಕರಾಗಿ ಆಯ್ಕೆ ಮಾಡಿದ್ದು ಮಾದರಿ ಎನಿಸಿದೆ ಎಂದ ಕುಮಾರಸ್ವಾಮಿ ಬಮುಲ್ ನಿರ್ದೇಶಕ ಭವಾನಿಶಂಕರ್‌ಬೈರೇಗೌಡ ಅವರನ್ನು ಸನ್ಮಾನಿಸಿದರು. ಹಾಗೆಯೇ ಕ್ಷೇತ್ರದ ಸಮಸ್ಯೆಗಳು ಹಾಗೂ ಚುನಾವಣಾ ವಿಚಾರ ಸೇರಿ ಸಾಕಷ್ಟು ವಿಷಯಗಳ ಕುರಿತು ಚರ್ಚಿಸಿದರು.

ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜಯಣ್ಣ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಗುರುಪ್ರಕಾಶ್, ಬಿ.ಎಂ.ಶ್ರೀನಿವಾಸ್, ನಾಗಭೂಷಣ್, ಸೋಂಪುರ ವಿಎಸ್‌ಎಸ್‌ಎನ್ ಅಧ್ಯಕ್ಷ ಮೋಹನ್‌ಕುಮಾರ್, ಒಕ್ಕಲಿಗರ ಸಂಘದ ಅಧ್ಯಕ್ಷ ತಿಮ್ಮರಾಜು, ಕುವೆಂಪು ಬ್ಯಾಂಕ್ ಅಧ್ಯಕ್ಷ ನಟರಾಜು, ನಗರಸಭೆ ಸದಸ್ಯ ಸುನೀಲ್‌ಮೂಡ್, ಹೆಚ್ಚುವರಿ ಸದಸ್ಯ ಮುನಿರಾಜು, ಕೃಪಾನಂದ್, ಅಂಜನಮೂರ್ತಿ, ರಾಮಮೂರ್ತಿ, ವಕೀಲ ಅನ್ನದಾನಯ್ಯ, ಕನಕರಾಜು, ಮುಖಂಡ ವಿಜಯ್‌ಕುಮಾರ್, ಪುಟ್ಟಣ್ಣ, ಪಟೇಲ್‌ವೆಂಕಟೇಶ್, ಮಹೇಶ್, ಮಂಜುನಾಥ್, ಚನ್ನಕೇಶವ್ ಮತ್ತಿತರರು ಉಪಸ್ಥಿತರಿದ್ದರು.

ರೈತರಿಗೆ ಅನ್ಯಾಯ ಮಾಡಲ್ಲ

ಕ್ಷೇತ್ರದ ರೈತರ ಜೀವನಾಧಾರವಾಗಿರುವ ಹೈನುಗಾರಿಕೆಯ ಅಭಿವೃದ್ಧಿ ಜತಗೆ ರೈತರಿಗೆ ಎಂದಿಗೂ ಅನ್ಯಾಯ ಮಾಡುವುದಿಲ್ಲ. ರೈತರ ಸೇವೆ ಹಾಗೂ ರೈತರ ಶ್ರೇಯೋಭಿವೃದ್ಧಿಯೇ ನನ್ನ ಮೊದಲ ಉದ್ದೇಶ ಎಂದು ಬಮುಲ್ ನಿರ್ದೇಶಕ ಭವಾನಿಶಂಕರ್‌ಬೈರೇಗೌಡ ಹೇಳಿದರು.