ಜಿಲ್ಲೆ

ಭಿಕ್ಷಾಟನೆಯಲ್ಲಿ ತೊಡಗಿದ್ದ ಮಕ್ಕಳ ರಕ್ಷಣೆ

ಬೆಳಗಾವಿ: ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ಮೇ 26ರಂದು ಬೀದಿಬದಿ ಭಿಕ್ಷಾಟನೆಯಲ್ಲಿ ತೊಡಗಿದ್ದ ಮಕ್ಕಳನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ರಕ್ಷಣೆ ಮಾಡಿದ್ದು, ಮಕ್ಕಳ ಕಲ್ಯಾಣ ಸಮಿತಿ ಆದೇಶದನ್ವಯ ಸತ್ಯಮ್ಮ ಹಿರೇಮನಿ (6) ಮಾರಿಯಮ್ಮ ಹಿರೇಮನಿ (2) ಎಂಬ ಮಕ್ಕಳನ್ನು ಬೆಳಗಾವಿ ಸ್ವಾಮಿ ವಿವೇಕಾನಂದ ಸೇವಾ ಪ್ರತಿಷ್ಠಾನದಲ್ಲಿಡಲಾಗಿದೆ.

ಮಕ್ಕಳ ತಂದೆ-ತಾಯಿ ಗದಗ ಜಿಲ್ಲೆಯ ಗಜೇಂದ್ರ ಗಡದವರಾಗಿದ್ದಾರೆ ಎಂದು ತಿಳಿದು ಬಂದಿದೆ. ಪಾಲಕರು ಸುವರ್ಣ ವಿಧಾನಸೌಧದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಚೇರಿ ದೂ: 0831-2474111/8073972929 ಗೆ ಸಂಪರ್ಕಿಸಬೇಕು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತೇಶ ಭಜಂತ್ರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.