ಗದಗ
ಭಿಕ್ಷಾಟನೆಯಲ್ಲಿ ತೊಡಗಿಕೊಂಡಿದ್ದ ಇಬ್ಬರು ಚಿಕ್ಕ ಮಕ್ಕಳನ್ನು ಅಧಿಕಾರಿಗಳು ರಕ್ಷಣೆ ಮಾಡಿದ ಘಟನೆ ಗದಗ ನಗರದಲ್ಲಿ ನಡೆದಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ, ಸಖಿ ಒನ್ ಸ್ಟಾಪ್ ಸೆಂಟರ್ ಕೇಂದ್ರದ ಆಡಳಿತ ಅಧಿಕಾರಿ ಸುಜಾತ ಸಿ ಮಠಪತಿ ಹಾಗೂ ಸಿಬ್ಬಂದಿಗಳ ಕಾರ್ಯಾಚರಣೆ ಮೂಲಕ ಇಬ್ಬರು ಹೆಣ್ಣು ಮಕ್ಕಳನ್ನು ರಕ್ಷಣೆ ಮಾಡಿದರು. ನಗರದ ಮುಳಗುಂದ ನಾಕಾ ಸಿಗ್ನಲ್ ನಲ್ಲಿ ೧ ವರ್ಷದ ಮಗುವನ್ನು ಹೊತ್ತುಕೊಂಡು ೬ ವರ್ಷದ ಬಾಲಕಿ ಭಿಕ್ಷಾಟನೆ ಮಾಡುತ್ತಿದ್ದಳು. ಇದನ್ನು ಗಮನಿಸಿದ ಸುಜಾತ ಸಿ ಮಠಪತಿ ಎಂಬ ಅಧಿಕಾರಿ ಹಾಗೂ ಇವರ ತಂಡ ಇಬ್ಬರೂ ಮಕ್ಕಳನ್ನ ವಶಕ್ಕೆ ಪಡೆದು ವಿಚಾರಿಸಿದರು. ಹೀಗೆ ಮಕ್ಕಳು ವಶಕ್ಕೆ ಪಡೆದುಕೊಳ್ಳುತ್ತಿದ್ದಂತೆ ತಕ್ಷಣ ಸ್ಥಳಕ್ಕೆ ತಾಯಿ ಸ್ಥಳಕ್ಕೆ ದಾವಿಸಿದಳು. ಕೆಲಕಾಲ ರಂಪಾಟ, ಹೈಡ್ರಾಮಾ ಮಾಡುವ ಮೂಲಕ ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿದಳು. ಆಗ ಅಧಿಕಾರಿಗಳು ತರಾಟೆಗೆ ತೆಗೆದುಕೊಂಡರು. ತಪ್ಪಾಗಿದೆ ಎಂದು ಕಣ್ಣೀರು ಸುರಿಸುತ್ತಾ ಅಂಗಲಾಚಿ ತಾಯಿ ಬೇಡಿಕೊಂಡಳು. ಅದಷ್ಟೇ ಗೋಗರೆದರೂ, ತಾಯಿ ಹಾಗೂ ಇಬ್ಬರು ಚಿಕ್ಕ ಮಕ್ಕಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಗೆ ಹಸ್ತಾಂತರಿಸಲಾಯಿತು. ಅಧಿಕಾರಿಗಳ ಕಾರ್ಯಕ್ರಮಕ್ಕೆ ಸಾರ್ವಜನಿಕರು ಶ್ಲಾಘನೀಯ ವ್ಯಕ್ತಪಡಿಸಿದರು.