ಅಥಣಿ: ವಿಶ್ವದಲ್ಲಿಯೇ ಶ್ರೀಮಂತ ಸಂಸ್ಕೃತಿ ಭಾಷೆಯಾಗಿರುವ ಕನ್ನಡ ಬಳಕೆ ಹೆಚ್ಚಾಗಬೇಕು. ಕನ್ನಡ ಉಳಿಸಿ-ಬೆಳೆಸುವಲ್ಲಿ ಎಲ್ಲರೂ ಮುಂದಾಗಬೇಕು. ಅಂದಾಗ ಮಾತ್ರ ಕನ್ನಡ ಉಳಿಸಲು ಸಾಧ್ಯ ಎಂದು ಕರವೇ ಅಧ್ಯಕ್ಷ ಎಚ್.ಶಿವರಾಮೇಗೌಡ ಹೇಳಿದರು.
ಪಟ್ಟಣದ ಕೆಎಲ್‌ಇ ಸಂಸ್ಥೆಯ ಎಸ್‌ಎಂಎಸ್ ಕಾಲೇಜಿನ ಖೋತ ಸಭಾಂಗಣದಲ್ಲಿ ಕರ್ನಾಟಕ ರಕ್ಷಣಾ ವೇದಿಕ ತಾಲೂಕು ಘಟಕದಿಂದ ಭಾನುವಾರ ಹಮ್ಮಿಕೊಂಡಿದ್ದ ಗಡಿನಾಡ ಕನ್ನಡೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ವಿದೇಶಿ ಸಂಸ್ಕೃಗೆ ಮಾರು ಹೋಗಿ ನಮ್ಮತನ ಮರೆಯಬಾರದು. ಅನ್ಯಭಾಷೆ ಗೌರವಿಸುವ ಮೂಲಕ ಮಾತೃ ಭಾಷೆ ಪ್ರೀತಿಸಬೇಕು. ಕನ್ನಡ ಪದಗಳಲ್ಲಿರುವ ಶ್ರೀಮಂತಿಕೆ ಅನ್ನಭಾಷೆಗಳಲ್ಲಿ ಇಲ್ಲ ಎಂದರು. ಸಾಹಿತಿ ಡಾ.ಬಾಳಾಸಾಹೇಬ ಲೋಕಾಪುರ ಮಾತನಾಡಿ, ಗಡಿಭಾಗಗಳಲ್ಲಿ ಕನ್ನಡ ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಸಾಧಕರಿಗೆ ಗಡಿನಾಡ ಕನ್ನಡ ರತ್ನ ಪ್ರಶಸ್ತಿ, ಕನ್ನಡ ಭಾಷಣ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಶೆಟ್ಟರಮಠದ ಮರುಳಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕರವೇ ಉತ್ತರ ಕರ್ನಾಟಕ ವಿಭಾಗೀಯ ಅಧ್ಯಕ್ಷ ಮಹಾಂತೇಶ ರಣಗಟ್ಟಿಮಠ ಮಾತನಾಡಿದರು. ಪುರಸಭೆ ಅಧ್ಯಕ್ಷೆ ಶಿವಲೀಲಾ ಬುಟಾಳೆ, ಉಪಾಧ್ಯಕ್ಷೆ ಭುವನೇಶ್ವರಿ ಯಂಕಚ್ಚಿ, ಆರ್.ಎಸ್.ದೊಡ್ಡನಿಂಗಗೋಳ, ಅರ್ಚನಾ ಅಥಣಿ, ಜಿಲ್ಲಾ ಕರವೇ ಅಧ್ಯಕ್ಷ ವಾಜಿದ್ ಹಿರೇಕುಡಿ, ಎಸ್.ಕೆ.ಹೊಳೆಪ್ಪನವರ, ಕೆ.ಎ.ವನಜೋಳ, ಡಾ.ರಮೇಶ ಗುಳ್ಳ, ಪ್ರಿಯಂವದಾ ಅಣೆಪ್ಪನವರ, ಅಪ್ಪಾಸಾಬ್ ಅಲಿಬಾದಿ, ಬಿ.ಎಸ್.ಕಾಂಬಳೆ, ಜಗನ್ನಾಥ ಬಾಮನೆ, ಅಣ್ಣಾಸಾಹೇಬ ತೆಲಸಂಗ, ಪ್ರಶಾಂತ ತೊಡಕರ ಇತರರಿದ್ದರು.