ಸವದತ್ತಿ: ಭಾವೈಕ್ಯದಿಂದ ಮೊಹರಂ ಹಬ್ಬ ಆಚರಿಸಬೇಕು ಎಂದು ಪಿಐ ಧರ್ಮಾಕರ ಧರ್ಮಟ್ಟಿ ಹೇಳಿದರು.
ಪಟ್ಟಣದ ಪೊಲೀಸ್ ಠಾಣಾ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮೊಹರಂ ಶಾಂತಿ ಸಭೆಯಲ್ಲಿ ಮಾತನಾಡಿದರು. ಸಮಯಕ್ಕೆ ಸರಿಯಾಗಿ ಮೊಹರಂ ಮೆರವಣಿಗೆ ಆರಂಭಿಸಬೇಕು. ಡಿಜೆ ಬಳಕೆಗೆ ಅನುಮತಿ ಇರುವುದಿಲ್ಲ. ಭಕ್ತಿ&ಭಾವದಿಂದ ಹಬ್ಬ ಆಚರಿಸುವ ಮೂಲಕ ಮುಂದಿನ ಪೀಳಿಗೆಗೆ ಒಳ್ಳೆಯ ಸಂದೇಶ ನೀಡಬೇಕು ಎಂದರು.
ಪಿಎಸ್ಐ ಆನಂದ ಕ್ಯಾರಕಟ್ಟಿ ಮಾತನಾಡಿ, ಅಥಣಿ ಮತ್ತು ಸವದತ್ತಿ ತಾಲೂಕಿನಲ್ಲಿಯೇ ಹೆಚ್ಚಿನ ವಾಹನ ಅಪಘಾತ ಪ್ರಕರಣಗಳು ದಾಖಲಾಗಿವೆ. ಜೀವ ರಣೆಗಾಗಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ವಾಹನ ಚಾಲನೆ ಮಾಡಬೇಕು ಎಂದು ಸೂಚಿಸಿದರು. ಮುಖಂಡ ಅಬ್ದುಲ್ತ್ೀ ಸವದತ್ತಿ, ಯಲ್ಲಪ್ಪ ಗೊರವನಕೊಳ್ಳ, ಅಮಿರ್ ಗೋರಿನಾಯಕ, ದತ್ತಾತ್ರೇಯ ಕುಲಕರ್ಣಿ, ದಿಲಾವರ್ ಮಲ್ಲಾ, ಬಾಬುಸಾಬ್ ನಾಶಿಪುಡಿ, ಹುಸೇನ್ ಗೋರವನಕೊಳ್ಳ, ದಿಲಾವರ್ ಸನದಿ, ಮಹಾದೇವ ಕಲಾಲ, ಹುಸೇನ್ ಬೈರಕದಾರ್, ಕುತ್ಬುಸಾಬ್ ದೊಡವಾಡ ಇತರರಿದ್ದರು.