ಆನಂದಪುರ ಸಮೀಪದ ಮುಂಬಾಳಿನ ಜುಮ್ಮಾ ಮಸೀದಿಯಲ್ಲಿ ವಾರ್ಷಿಕ ಉರುಸ್ ಕಾರ್ಯಕ್ರಮ ನಡೆಯಿತು. ಐ.ಕೆ.ಇಕ್ಬಾಲ್ ಮದನಿ, ಕರೀಂ, ಉಸ್ಮಾನ್ ಮುಂಬಾಳು ಮತ್ತಿತರರಿದ್ದರು. 
ಜಿಲ್ಲೆ

ಭಾವೈಕ್ಯತೆ ಜತೆಗೆ ಹಿರಿಯರನ್ನು ಗೌರವಿಸಿ

ಟಿ.ಎಚ್.ಸಂತೋಷ್ ಕುಮಾರ್

ಆನಂದಪುರ: ನಮ್ಮ ಪರಿಸರದಲ್ಲಿ ಭಾವೈಕ್ಯತೆಯ ಬದುಕು ನಡೆಸುವ ಮೂಲಕ ಹಿರಿಯರಿಗೆ ಗೌರವ ನೀಡಬೇಕು ಎಂದು ಶಿವಮೊಗ್ಗ ಜಿಲ್ಲಾ ಎಸ್‌ವೈಎಸ್ ಅಧ್ಯಕ್ಷ ಅಸಯ್ಯಿದ್ ಅಬೂಬಕರ್ ಸಿದ್ಧಿಖ್ ತಂಜಳ್ ಅಲ್ ಹಾದಿ ತಿಳಿಸಿದರು. ಮುಂಬಾಳಿನ ಮುಹ್ಯುದ್ದೀನ್ ಜುಮ್ಮಾ ಮಸೀದಿಯ ದರ್ಗಾ ಶರ್ೀ ಉರುಸ್ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದ ಅವರು, ವಾರ್ಷಿಕವಾಗಿ ನಡೆಸುವ ಉರುಸ್‌ನಲ್ಲಿ ವಿಶಿಷ್ಟ ಸಾಧನೆ ಮಾಡಿದ ಸ್ಥಳೀಯ ಸಂತರನ್ನು ಮತ್ತು ಧರ್ಮ ಸಂಸ್ಥಾಪಕ ಪ್ರವಾದಿಗಳನ್ನು ಪೂಜಿಸಲಾಗುವುದು ಎಂದರು.

ಹಿರಿಯರ ಸಂದೇಶವನ್ನು ನಮ್ಮ ಬಾಳಿನಲ್ಲಿ ಅಳವಡಿಸಿಕೊಂಡರೆ ಸಾರ್ಥಕತೆ ಲಭಿಸುತ್ತದೆ. ಇಲ್ಲಿನ ಉರುಸ್‌ನ ಕೇಂದ್ರ ವ್ಯಕ್ತಿ ದಿವಂಗತ ಹಝ್ರತ್ ಜಂಗಲ್ ಫೀರ್ ಸಯ್ಯಿದ್ ಶಂಸುದ್ದೀನ್ ಖಾದಿರಿ ರಳಿಯಲ್ಲಾಹು ಅನ್‌ಹುರ್ ಅವರ ಗೋರಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣದಿಂದ ಅಸ್ತಿತ್ವ ಕಳೆದುಕೊಳ್ಳುವ ಭೀತಿಯಿದೆ ಎಂದರು. ಇದಕ್ಕೆ ಸ್ಥಳೀಯರು ತಕ್ಷಣ ಮನವಿ ಸಲ್ಲಿಸಿ ಗೋರಿಯನ್ನು ಉಳಿಸಿಕೊಳ್ಳುವ ಕಾರ್ಯ ನಡೆಸಬೇಕು ಎಂದರು.

ಮಸೀದಿಯ ಪ್ರಮುಖರಾದ ಐ.ಕೆ.ಇಕ್ಬಾಲ್ ಮದನಿ ಉದ್ಘಾಟಿಸಿದರು. ಮಸೀದಿ ಸಮಿತಿ ಅಧ್ಯಕ್ಷ ಕೆ.ಎಂ.ಕೆ. ಕರೀಂ, ಉಸ್ಮಾನ್ ಮುಂಬಾಳು, ನೂರುಲ್ ಇಸ್ಲಾಂ ಅರೆಬಿಕ್ ಸ್ಕೂಲ್‌ನ ಮುಖ್ಯಶಿಕ್ಷಕ ನೌಶಾದ್ ಜೌಹರಿ ಕುಂಡಡ್ಕ , ಮಸೀದಿಯ ಖತೀಬರಾದ ಡಿ.ಎಂ.ಅಬೂಬಕರ್ ಮದನಿ, ಝೀ ಹಂಝ, ಅಶ್ರ್, ರಫೀಕ್, ಅನ್ವರ್, ಕೋಡಿ ಮಹಮದ್ ಅಬೂಬಕರ್, ರಿಪ್ಪನ್‌ಪೇಟೆ ಮುಹ್ಯುದ್ದೀನ್ ಮಸೀದಿ ಕಾರ್ಯದರ್ಶಿ ಶೇಖಬ್ಬ ಮತ್ತಿತರರಿದ್ದರು.