ಹುಕ್ಕೇರಿ: ಗ್ರಾಮೀಣ ಜನ ಸೌಹಾರ್ದತೆಯಿಂದ ಬದುಕಲು ಅವರು ಕೈಗೊಳ್ಳುವ ಧಾರ್ಮಿಕ ಕಾರ್ಯಕ್ರಮಗಳಿಂದ ಸಾಧ್ಯ. ಜಾತ್ರಾ ಮಹೋತ್ಸವದಿಂದ ಭಾವೈಕ್ಯತೆ ಹೆಚ್ಚಾಗುತ್ತದೆ ಎಂದು ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.
ತಾಲೂಕಿನ ಎಲಿಮುನ್ನೋಳಿ ಗ್ರಾಮದ ವಡಗೇರಿ ಶ್ರೀ ಲಕ್ಷ್ಮಿ ದೇವಿಯ ಜಾತ್ರೆಯಲ್ಲಿ ಕಮಿಟಿಯವರಿಂದ ಶುಕ್ರವಾರ ಸತ್ಕಾರ ಸ್ವೀಕರಿಸಿ ಮಾತನಾಡಿದರು. ಹಿಂದಿನ ಹಿರಿಯರು ಶ್ರಾವಣದಿಂದ ಪ್ರಾರಂಭ ಮಾಡಿದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮಕರ ಸಂಕ್ರಾಂತಿವರೆಗೆ ಜರುಗುತ್ತವೆ. ನಂತರ ಬೇಸಿಗೆಯಲ್ಲಿ ಮತ್ತೇ ಜಾತ್ರೆ ಆರಂಭಿಸುತ್ತಾರೆ. ವರ್ಷವಿಡಿ ದುಡಿಯುವ ರೈತ ಮತ್ತು ಆತನ ಕುಟುಂಬಕ್ಕೆ ಇಂತಹ ಕಾರ್ಯಕ್ರಮ ಉತ್ಸಾಹ ಹೆಚ್ಚಿಸುತ್ತವೆ ಎಂದರು.
ವಡಗೇರಿ ಪ್ರದೇಶದಲ್ಲಿ ವಾಸಿಸುವ ರೈತರು ಮತ್ತು ಜನಸಾಮಾನ್ಯರಿಗೆ ಅವಶ್ಯಕವಾಗಿರುವ ರಸ್ತೆ ಡಾಂಬರಿಕರಣ ಮತ್ತು ಜನರ ಸಮಸ್ಯೆಗೆ ಪರಿಹಾರ ಸೂಚಿಸಿದರು.
ಗ್ರಾಪಂ ಅಧ್ಯಕ್ಷ ಮೀರಾಸಾಬ್ ಮುಲ್ತಾನಿ, ಕೆಂಪಣ್ಣ ವಾಸೆದಾರ, ವಕೀಲ ಬಿ.ಕೆ.ಮಗೆನ್ನವರ, ಭೀಮಗೌಡಾ ಗಿರಿಗೌಡನವರ, ಮಕ್ಬೂಲ್ ಮುಲ್ಲಾ, ಮಲ್ಲಪ್ಪ ಚೌಗಲಾ, ಚಂದು ಮಾಳಾಜ, ಈರಪ್ಪ ಮೆಟಗೊಡ್ಲಿ, ಉಮೇಶ ಬೆನವಾಡಿ, ಚೆನ್ನಬಸು ಜೋಡಟ್ಟಿ, ವಿದ್ಯಾಧರ ಧಾಮನೆಮಠ, ಬಸು ಮಾಳಾಜ, ದುಂಡಪ್ಪ ಮಂಡೇಟರ ಇತರರು ಇದ್ದರು.