ಜಿಲ್ಲೆ

ಭಾವೈಕ್ಯ ಸಮಾಜ ನಿರ್ಮಾಣಕ್ಕೆ ಶಿಶುನಾಳರು ಶ್ರಮ

ಸೇಡಂ: ತತ್ವಪದಕಾರ ಸಂತ ಶಿಶುನಾಳ ಶರೀಫರು ಜಾನಪದದಿಂದ ಸಮ ಸಮಾಜ ನಿರ್ಮಾಣಕ್ಕಾಗಿ ಸಾಕಷ್ಟು ಸಂದೇಶಗಳನ್ನು ನೀಡಿದ್ದಾರೆ ಎಂದು ಹಾಲಪ್ಪಯ್ಯ ಮಠದ ಶ್ರೀ ಪಂಚಾಕ್ಷರ ಸ್ವಾಮೀಜಿ ಹೇಳಿದರು.

ಸಣ್ಣಅಗಸಿಯಲ್ಲಿರುವ ಬಾಣಂತಿ ಕಂಬದ ಆವರಣದಲ್ಲಿ ಗುರುವಾರ ರಾತ್ರಿ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಹಚ್ಚೆವು ಕನ್ನಡದ ದೀಪ ಮಾಲಿಕೆಯಡಿ ಸಂತ ಶಿಶುನಾಳ ಶರೀಫರ ಜೀವನ ಸಂದೇಶದ ಉಪನ್ಯಾಸ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಗುರು ಗೋವಿಂದಭಟ್ಟರ ಶಿಷ್ಯರಾಗಿ ಅವರು ಮಾಡಿದ ಕೆಲಸ ಸ್ಮರಣೀಯ. ನಿಷ್ಕಲ್ಮಶ ಮನಸ್ಸು ಹೊಂದಿದ್ದ ಶರೀಫರು, ಆಚಾರ-ವಿಚಾರ, ತತ್ವಗಳಿಂದ ಭಾವೈಕ್ಯ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದರು ಎಂದರು.

ಮಳಖೇಡ ದರ್ಗಾದ ಸೈಯ್ಯದ್ ಶಾಹ ಮುಸ್ತಫಾ ಖಾದ್ರಿ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ ಮಾತನಾಡಿದರು. ಸಾಹಿತಿ ಮುಡಬಿ ಗುಂಡೇರಾವ ಉಪನ್ಯಾಸ ನೀಡಿದರು.

ಸಾದೇಸಾಹೇಬ್ ದರ್ಗಾದ ಮಿರ್ಜಾ ಮುದಸೀರ್ ಬೇಗ್, ಪುರಸಭೆ ಸದಸ್ಯೆ ಸುನಂದಾ ರಾಜಾಪುರ, ಪ್ರಮುಖರಾದ ಶರಣಪ್ಪ ತುಳೇರ, ಶಂಕರ ಬೋಳದ್, ಭೀಮಶಾ ಜಜ್ಜಲ್, ಶಾಭೋದ್ದಿನ್ ಹೈಯ್ಯಾಳ, ಅನಂತರೆಡ್ಡಿ ಪಾಟೀಲ್, ಜನಾರ್ಧನರೆಡ್ಡಿ ತುಳೇರ ಇತರರಿದ್ದರು. ಬಸವರಾಜ ಬಾಳಿ ಪ್ರಾರ್ಥಿಸಿದರು. ಕಸಾಪ ತಾಲೂಕು ಅಧ್ಯಕ್ಷೆ ಸುಮಾ ಚಿಮ್ಮನಚೋಡಕರ್ ಪ್ರಾಸ್ತವಿಕ ಮಾತನಾಡಿದರು. ಪ್ರಕಾಶ ಗೋಣಗಿ ಸ್ವಾಗತಿಸಿ, ನಿರೂಪಣೆ ಮಾಡಿದರು.