ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಭಾವಸಾರ ಕ್ಷತ್ರಿಯ ಸಹಕಾರ ಪತ್ತಿನ ಸಂಘ 2023-24ನೇ ಆರ್ಥಿಕ ವರ್ಷದಲ್ಲಿ 1,63,20,735 ರೂ. ಲಾಭ ಗಳಿಸಿದೆ. ಸದಸ್ಯರಿಗೆ ಶೇ. 12ರಷ್ಟು ಡಿವಿಡೆಂಡ್ ಘೊಷಿಸಿದೆ.
ದೇಶಪಾಂಡೆನಗರ ಸವಾಯಿ ಗಂಧರ್ವ ಸಭಾಭವನದಲ್ಲಿ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಚೇರ್ಮನ್ ಶಂಕರ ಕುಂಠೆ, ಸಂಘವು 2023-24ರಲ್ಲಿ 167 ಕೋಟಿ ರೂಪಾಯಿ ವಹಿವಾಟು ನಡೆಸಿದೆ ಎಂದು ತಿಳಿಸಿದರು. ಉಪಾಧ್ಯಕ್ಷ ರಾಕೇಶ ಚುಟಕೆ ವಾರ್ಷಿಕ ವರದಿ ಓದಿದರು. ಆಡಳಿತ ಮಂಡಳಿಯ ವರದಿಯನ್ನು ನಿರ್ದೇಶಕ ಮಹೇಶ ಸರ್ವದೆ ಸಭೆಗೆ ಮಂಡಿಸಿದರು.
ನಿರ್ದೇಶಕರಾದ ಜಗದೀಶ ಹಂಚಾಟೆ, ಹೇಮಾ ಸರ್ವದೆ, ಪಾಂಡುರಂಗ ಬೆದರೆ, ನಾರಾಯಣ ಬೆಳಮಕರ, ಅರಣ ಬೆಳಂಕರ್, ಗಣೇಶ ತೇಲಕರ, ಆರ್ಥಿಕ ಸಲಹೆಗಾರ ಮಲ್ಲಿಕಾರ್ಜುನ ಪಿಸೆ, ವಿನಯ ಕುಲಕರ್ಣಿ ಮತ್ತು ಅಮೀತ ಬಾಬಜಿ ಇದ್ದರು. ಸದಸ್ಯರ ಮಕ್ಕಳ ಶಿಕ್ಷಣಕ್ಕಾಗಿ ಧನ ಸಹಾಯ ವಿತರಿಸಲಾಯಿತು. ಮುಖ್ಯಕಾರ್ಯನಿರ್ವಾಹಕ ಸಚಿನ್ ಚಂದಗಡಕರ ನಿರೂಪಿಸಿದರು. ನಿರ್ದೇಶಕಿ ಸೀಮಾ ಫಟಕೆ ವಂದಿಸಿದರು. ಕಳೆದ ಸಾಲಿನಲ್ಲಿ ನಿಧನರಾದ ಸಂಘದ ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.