ಜಿಲ್ಲೆ

ಭಾವನಾತ್ಮಕ ಸಂಬಂಧ ಬೆಸೆಯುವ ಧ್ವಜ

ಹೂವಿನಹಡಗಲಿ: ದೇಶದ ಸಾರ್ವಭೌಮತ್ವ ಮತ್ತು ಸ್ವಾಭಿಮಾನ ಬಿಂಬಿಸುವ ರಾಷ್ಟ್ರಧ್ವಜ ನಮ್ಮಲ್ಲಿ ಭಾವನಾತ್ಮಕ ಸಂಬಂಧವನ್ನು ಬೆಳೆಸುತ್ತದೆ. ನಮ್ಮ ಮನೆ ಮೇಲೆ ತಿರಂಗಾ ಹಾರಿಸುವ ಮೂಲಕ ದೇಶ ಹಾಗೂ ರಾಷ್ಟ್ರಧ್ವಜವನ್ನು ಗೌರವಿಸೋಣ ಎಂದು ಬಿಜೆಪಿ ಒಬಿಸಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಈಟಿ ಲಿಂಗರಾಜ ಹೇಳಿದರು.

ಹರ್‌ಘರ್ ತಿರಂಗಾ ಅಭಿಯಾನದ ಅಂಗವಾಗಿ ಪಟ್ಟಣದ ಶಾಸ್ತ್ರಿ ವೃತ್ತದಲ್ಲಿ ನಡೆದ ಬೈಕ್ ರ‌್ಯಾಲಿಯಲ್ಲಿ ಬುಧವಾರ ಮಾತನಾಡಿದರು. ಪ್ರತಿ ಮನೆ ಮೇಲೆ ಆ.15 ರಂದು ಬೆಳಗ್ಗೆ ತ್ರಿವರ್ಣ ಧ್ವಜಾರೋಹಣ ಮತ್ತು ಸಂಜೆ ಶಿಷ್ಠಾಚಾರದಂತೆ ಅವರೋಹಣ ಮಾಡಬೇಕು. ರಾಷ್ಟ್ರ ಧ್ವಜಕ್ಕೆ ಅಪಮಾನ ಆಗದಂತೆ ನೋಡಿಕೊಳ್ಳುವುದು ಪ್ರತಿ ಪ್ರಜೆಯ ಕರ್ತವ್ಯವಾಗಿದೆ ಎಂದರು.

ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ, ಮಾಜಿ ಅಧ್ಯಕ್ಷ ಶಶಿಧರ್, ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾಧ್ಯಕ್ಷ ಸಿರಾಜ್ ಬಾವಿಹಳ್ಳಿ, ಯುವಮೋರ್ಚಾ ತಾಲೂಕು ಅಧ್ಯಕ್ಷ ಸಂತೋಷ್, ಮಾಜಿ ಅಧ್ಯಕ್ಷ ಪುನೀತ್ ದೊಡ್ಡಮನಿ, ವಕೀಲ ಶಿವಕುಮಾರ್, ಪ್ರಮುಖರಾದ ಪರಮೇಶಪ್ಪ, ವಿಶ್ವನಾಥ, ಹಾಲೇಶ್, ಈಟಿ ಅಶೋಕ, ಕೃಷ್ಣ, ವಿನೋದ ಜಾಡರ ಇತರರಿದ್ದರು.