ಭಾಲ್ಕಿ: ತಾಲೂಕಿನ ಬಾಳೂರ, ಹಲಬರ್ಗಾ ಮತ್ತು ನಿಟ್ಟೂರ ಗ್ರಾಪಂನ ತಲಾ ಒಬ್ಬರು ಲಾಟರಿ ಮೂಲಕ ಸದಸ್ಯ ಸ್ಥಾನದ ಭಾಗ್ಯವನ್ನು ಪಡೆದಿದ್ದಾರೆ.
ಇಬ್ಬರಿಗೂ ಸಮನಾಗಿ ಮತಗಳು ಬಿದ್ದಿರುವ ಕಾರಣ, ಎಲ್ಲರ ಸಹಮತಿಯಂತೆ ಅಧಿಕಾರಿಗಳ ಸಮ್ಮುಖ ಲಾಟರಿ ಚೀಟಿ ಎತ್ತಿ ಫಲಿತಾಂಶ ಘೋಷಿಸಲಾಗಿದೆ. ಬಾಳೂರ ಗ್ರಾಪಂನ ಗೊರನಾಳ ಸಾಮಾನ್ಯ ವಾಡ್೯ ನರಸಮ್ಮ ಮತ್ತು ಬಾಬು ಅವರು ತಲಾ 217 ಮತ ಗಳಿಸಿದ್ದರು. ಲಾಟರಿಯಲ್ಲಿ ನರಸಮ್ಮ ಅವರಿಗೆ ಅದೃಷ್ಟ ಒಲಿದಿದೆ.
ಹಲಬರ್ಗಾ ಗ್ರಾಪಂನ ಪರಿಶಿಷ್ಟ ಜಾತಿ ಮೀಸಲು ವಾಡ್೯ನಿಂದ ಸ್ಪರ್ಧಿಸಿದ್ದ ಮೋಹನ್ ಹಾಗೂ ಶಶಿಕಾಂತ ಅವರಿಗೆ ತಲಾ 215 ಮತ ಬಂದಿದ್ದವು. ಲಾಟರಿಯು ಮೋಹನ್ ಅವರಿಗೆ ಲಕ್ಕಿಯಾಯಿತು. ನಿಟ್ಟೂರಿನ ಸಾಮಾನ್ಯ ವಾಡ್೯ನಲ್ಲಿದ್ದ ಅನೀತಾ ಹಾಗೂ ಲಕ್ಷ್ಮೀಬಾಯಿ ಅವರು ತಲಾ 252 ಮತ ಪಡೆದಿದ್ದರು. ಲಾಟರಿ ಚೀಟಿ ಎತ್ತಿದಾಗ ಅನೀತಾ ಅವರಿಗೆ ಅದೃಷ್ಟ ಒಲಿದಿದೆ.