ಭಾಲ್ಕಿ: ಇಲ್ಲಿಯ ವಕೀಲರ ಸಂಘದ ತಾಲೂಕು ನೂತನ ಅಧ್ಯಕ್ಷೆಯಾಗಿ ಆರತಿ ಎಸ್.ತಿವಾರಿ, ಉಪಾಧ್ಯಕ್ಷರಾಗಿ ಸುನೀತಾ ಕೆ.ಮಡ್ಡೆ, ಧನಲಕ್ಷ್ಮೀ ಬಳತೆ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಉಳಿದಂತೆ ಪ್ರಧಾನ ಕಾರ್ಯದಶರ್ಿಯಾಗಿ ಅನುಪಮಾ ಜಿ.ಶೇರಿಕಾರ ಮತ್ತು ಜಂಟಿ ಕಾರ್ಯದಶರ್ಿಯಾಗಿ ಪುಷ್ಪಾ ಎಸ್.ಸಿಸರ್ೆ ಆಯ್ಕೆ ಆಗುವ ಮೂಲಕ ಇದೇ ಮೊದಲ ಬಾರಿಗೆ ವಕೀಲರ ಸಂಘಕ್ಕೆ ಮಹಿಳೆಯರು ಸಾರಥ್ಯ ವಹಿಸಿದಂತಾಗಿದೆ.
ಪಟ್ಟಣದ ವಕೀಲರ ಸಂಘದ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಾಷರ್ಿಕ ಸಾಮಾನ್ಯ ಸಭೆಯಲ್ಲಿ ಎಲ್ಲರ ಒಪ್ಪಿಗೆ ಮೇರೆಗೆ 2023ರ ಮಾಚರ್್ವರೆಗೂ ಎಲ್ಲ ಸ್ಥಾನಗಳಿಗೆ ಮಹಿಳೆಯರನ್ನು ಅವಿರೋಧವಾಗಿ ಆಯ್ಕೆ ಮಾಡುವ ನಿರ್ಣಯ ಕೈಗೊಳ್ಳಲಾಯಿತು.
ನ್ಯಾಯಾಧೀಶರಾದ ಮಲ್ಲಿಕಾಜರ್ುನ ಅಂಬಲಿ, ಆನಂದ ಕೊಣ್ಣೂರ, ಅಭಿನವ ಕುಲಕಣರ್ಿ ನೂತನ ಪದಾಧಿಕಾರಿಗಳನ್ನು ಅಭಿನಂದಿಸಿದರು. ಸಂಘದ ಮಾಜಿ ಅಧ್ಯಕ್ಷ ಎನ್.ಬಿ.ಪಾಟೀಲ್, ವಕೀಲರಾದ ಉಮಾಕಾಂತ ವಾರದ್, ಓಂಪ್ರಕಾಶ ಪಾಟೀಲ್, ಮಹೇಶ ರಾಚೋಟೆ, ಸುಬೋಧ ತಿವಾರಿ, ಶಂಕರರಾವ ಭೋರಾಳೆ, ಕೈಲಾಸ ಮಡ್ಡೆ, ಸುಧಾಕರ ಸಿಸರ್ೆ, ಮಹೇಶ ಪರಸಣ್ಣೆ, ಸದಾಶಿವ ತುಕದೆ, ಸಂಜೀವಕುಮಾರ ಜೋಳದಾಪಕೆ, ಮಹಾಂತೇಶ ಪಾಟೀಲ್, ದೀಪಕ ಮಾಶೆಟ್ಟೆ ಇತರರಿದ್ದರು.