Patras blown away by strong winds 
ಜಿಲ್ಲೆ

ಭಾರಿ ಗಾಳಿಗೆ ಹಾರಿದ ಪತ್ರಾಸ್

ಜಮಖಂಡಿ: ಜೋರಾಗಿ ಬಿಸಿದ ಗಾಳಿಗೆ ತಾಲೂಕಿನ ತೋದಲಬಾಗಿ ಗ್ರಾಮದಲ್ಲಿ ಬುಧವಾರ ಸಂಜೆ ಮನೆಯೊಂದರ ಪತ್ರಾಸ್ ಹಾರಿ ಹೋಗಿದ್ದು, ನಿವಾಸಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅಶೋಕ ಶಿವಪ್ಪ ಬಜಂತ್ರಿ ಅವರ ಮನೆಯ ಛಾವಣಿಗೆ ಕಟ್ಟಿದ್ದ ಕಬ್ಬಿಣದ ಪೈಪ್‌ಗಳು ಗಾಳಿಯ ರಭಸಕ್ಕೆ ಕಿತ್ತು ಪತ್ರಾಸ್ ಹಾರಿವೆ. ತದನಂತರ ಸುರಿದ ಮಳೆಗೆ ಮನೆಯಲ್ಲಿನ ಕಾಳು, ಬಟ್ಟೆ ಸೇರಿ ದಿನಬಳಕೆ ವಸ್ತುಗಳು ಹಾಳಾಗಿವೆ.