ಜಿಲ್ಲೆ

ಭಾರಿ ಗಾತ್ರದ ಹೆಬ್ಬಾವು ರಕ್ಷಣೆ

ಯಳಂದೂರು : ತಾಲೂಕಿನ ಕೊಮಾರನಪುರ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಕಾಣಿಸಿಕೊಂಡ ಭಾರಿ ಗಾತ್ರದ ಹೆಬ್ಬಾವನ್ನು ರಕ್ಷಿಸಲಾಗಿದೆ.

ಗ್ರಾಮದ ರವಿ ಅವರ ಕಬ್ಬಿನ ಗದ್ದೆಯಲ್ಲಿ ಕಬ್ಬು ಕಟಾವು ನಡೆಯುತ್ತಿದ್ದ ವೇಳೆ ಮಧ್ಯಭಾಗದಲ್ಲಿ ಭಾರಿ ಗಾತ್ರದ ಹೆಬ್ಬಾವು ಕಾಣಿಸಿ ಕೊಂಡಿತ್ತು. ಇದನ್ನು ತಿಳಿದ ರವಿ ಅವರ ಮಾಹಿತಿ ಮೇರೆ ಸ್ಥಳಕ್ಕೆ ಬಂದ ಸ್ನೇಕ್ ಮಹೇಶ್ ಹಾಗೂ ಸ್ನೇಕ್ ಮಂಜು ಸುಮಾರು 8 ಅಡಿ ಉದ್ದ ಹೆಬ್ಬಾವನ್ನು ರಕ್ಷಿಸಿ ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ಬಿಆರ್‌ಟಿ ಅರಣ್ಯ ಪ್ರದೇಶಕ್ಕೆ ಬಿಟ್ಟು ಬಂದರು.